ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಗ್-29ಕೆ ವಿಮಾನ ಗೋವಾದಲ್ಲಿ ಪತನ, ಅಪಾಯದಿಂದ ಪಾರಾದ ಪೈಲಟ್

Last Updated 23 ಫೆಬ್ರುವರಿ 2020, 10:38 IST
ಅಕ್ಷರ ಗಾತ್ರ

ಗೋವಾ: ಭಾರತೀಯ ನೌಕಾಪಡೆಯ ತರಬೇತಿನಿರತ ಮಿಗ್-29ಕೆ ವಿಮಾನ ಗೋವಾ ಬಳಿ ಇಂದು ಅಪಘಾತಕ್ಕೀಡಾಗಿದ್ದು,ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂದು ಮುಂಜಾನೆ 10.30ರ ಸುಮಾರಿಗೆ ಮಿಗ್-29ಕೆ ವಿಮಾನವು ನೌಕಾ ಘಟದಲ್ಲಿ ಎಂದಿನಂತೆ ತರಬೇತಿಯಲ್ಲಿ ನಿರತವಾಗಿದ್ದ ವೇಳೆಅಪಘಾತಕ್ಕೀಡಾಗಿದೆ. ಈ ವೇಳೆಪೈಲಟ್ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಅವರನ್ನು ವಶಕ್ಕೆ ಪಡೆದಿದ್ದು, ಅಪಘಾತಕ್ಕೆ ಕಾರಣವೇನೆಂದು ತನಿಖೆಗೆ ಆದೇಶಿಸಲಾಗಿದೆ ಎಂದು ಇಂದು ಮಧ್ಯಾಹ್ನ ಭಾರತೀಯ ನೌಕಾಪಡೆಯು ಟ್ವೀಟ್ ಮಾಡಿದೆ.

ವಿಮಾನವು ಗೋವಾದ ವಾಸ್ಕೊದಲ್ಲಿರುವ ಐಎನ್‌ಎಸ್‌ ಹಾನ್ಸಾ ನೆಲೆಯಿಂದ ಹೊರಟಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಗೋವಾದ ಡಬೊಲಿಮ್‌ನಿಂದ ವಾಡಿಕೆಯ ತರಬೇತಿ ಕಾರ್ಯಾಚರಣೆಗೆ ಹೊರಟ ಕೆಲವೇ ಕ್ಷಣಗಳಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಮತ್ತೊಂದು ಮಿಗ್ -29ಕೆ ಫೈಟರ್ ಜೆಟ್ ಅಪಘಾತಕ್ಕೀಡಾಗಿತ್ತು.

ಈ ವೇಳೆಪೈಲಟ್ ಕ್ಯಾಪ್ಟನ್ ಎಂ. ಶೇಕಾಂಡ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಅವರು ಸುರಕ್ಷಿತವಾಗಿ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದರು.

ನೌಕಾಪಡೆ ನೀಡಿದ್ದ ಹೇಳಿಕೆ ಪ್ರಕಾರ, ತರಬೇತಿಗಾಗಿ ಬಳಸುವ ವಿಮಾನಕ್ಕೆ ಪಕ್ಷಿಗಳ ಹಿಂಡು ಡಿಕ್ಕಿ ಹೊಡೆದಿತ್ತು ಮತ್ತು ಘರ್ಷಣೆಯಿಂದಾಗಿ ಬಲಭಾಗದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಲ್ಲದೆ ಎಡಭಾಗದ ಎಂಜಿನ್ ವಿಫಲವಾಗಿತ್ತು ಎಂದು ಹೇಳಿತ್ತು.

ಗೋವಾದ ವಿಮಾನ ನಿಲ್ದಾಣವನ್ನು ನಾಗರಿಕರು ಮತ್ತು ಮಿಲಿಟರಿ ವಿಮಾನಗಳ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT