ಭಾನುವಾರ, ಏಪ್ರಿಲ್ 5, 2020
19 °C

ಕೊರೊನಾ ಭೀತಿ: ಅಗತ್ಯ ವಸ್ತುಗಳಿಗೆ ತತ್ವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಸ್‌ ಹರಡುವಿಕೆ ತಡೆಯುವುದಕ್ಕಾಗಿ ಏಪ್ರಿಲ್‌ 14ರವರೆಗೆ ದೇಶವಿಡೀ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಅವಧಿಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇ ಕಾಮರ್ಸ್‌ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಜನರಿಗೆ ವಸ್ತುಗಳ ಲಭ್ಯತೆ ಇಳಿಮುಖವಾಗಿದೆ ಎಂದು ಲೋಕಲ್‌ ಸರ್ಕಲ್ಸ್‌ ಸಾಮಾಜಿಕ ಮಾಧ್ಯಮ ವೇದಿಕಯು ನಡೆಸಿದ ಸಮೀಕ್ಷೆ ಹೇಳಿದೆ.

ಅಗತ್ಯ ವಸ್ತುಗಳ ಲಭ್ಯತೆ ಕೊರತೆ ‍ಪ್ರಮಾಣವು ಶೇ 35ರಿಂದ ಶೇ 79ಕ್ಕೆ ಏರಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಚಿಲ್ಲರೆ ಅಂಗಡಿಗಳಲ್ಲಿ ಅಗತ್ಯ ವಸ್ತು ಖರೀದಿ ಸಾಧ್ಯವಾಗಿಲ್ಲ ಎಂದು ಹೇಳಿರುವವರ ಪ್ರಮಾಣವು ಕಳೆದ ಕೆಲವು ದಿನಗಳಲ್ಲಿ ಶೆ 17ರಿಂದ ಶೇ 32ಕ್ಕೆ ಏರಿದೆ. 

ಇ–ಕಾಮರ್ಸ್‌ ಮೂಲಕ ಕಿರಾಣಿ ವಸ್ತುಗಳು ಅಥವಾ ಇತರ ವಸ್ತುಗಳಿಗೆ ಆರ್ಡರ್‌ ಮಾಡಿದವರಿಗೆ ಒಂದೋ ಅವು ತಲುಪುತ್ತಿಲ್ಲ ಅಥವಾ ‘ಸ್ಟಾಕ್‌ ಇಲ್ಲ’ ಎಂಬ ಉತ್ತರ ಬರುತ್ತಿದೆ.

ಅಗತ್ಯ ವಸ್ತುಗಳ ಲಭ್ಯತೆ ಮತ್ತು ಇ–ಕಾಮರ್ಸ್‌ ಮೂಲಕ ಖರೀದಿ ವಿಚಾರದಲ್ಲಿ ಗ್ರಾಹಕರ ಅನುಭವ ಏನು ಎಂಬ ಸಮೀಕ್ಷೆಯನ್ನು ಲೋಕಲ್‌ ಸರ್ಕಲ್ಸ್‌ ನಡೆಸಿದೆ. 164 ಜಿಲ್ಲೆಗಳ 16 ಸಾವಿರಕ್ಕೂ ಹೆಚ್ಚು ಗ್ರಾಹಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ಮಾರ್ಚ್‌ 20–22ರ ಅವಧಿಗೆ ಹೋಲಿಸಿದರೆ, ಕಳೆದ 48 ತಾಸುಗಳಲ್ಲಿ ಅಗತ್ಯ ವಸ್ತುಗಳು ಕೊರತೆಯಾಗಿದೆ ಎಂದು ಹೇಳಿದವರ ಪ್ರಮಾಣವು ಶೇ 35ರಿಂದ ಶೇ 79ಕ್ಕೆ ಏರಿದೆ. ಅಂದರೆ, ಇ–ಕಾಮರ್ಸ್‌ ಮೂಲಕ ಹೆಚ್ಚಿನ ಜನರಿಗೆ ಅಗತ್ಯ ವಸ್ತುಗಳು ತಲುಪಿಲ್ಲ.

ಇ–ಕಾಮರ್ಸ್‌ ಮೂಲಕ ಖರೀದಿ ಅನುಭವ

ವಿಳಂಬವಾಗಿ ದೊರೆಯಿತು ಎಂದವರ ಪ್ರಮಾಣ ಶೇ 14, ತಮ್ಮ ಆರ್ಡರ್‌ ರದ್ದು ಮಾಡಲಾಗಿದೆ ಎಂದವರ ಪ್ರಮಾಣ ಶೇ 17, ಆರ್ಡರ್‌ ಮಾಡಿದ ವಸ್ತುಗಳ ಪೈಕಿ ಸ್ವಲ್ಪ ಮಾತ್ರ ಸಿಕ್ಕಿದೆ ಎಂದವರ ಪ್ರಮಾಣ ಶೇ 21, ಸಕಾಲಕ್ಕೆ  ಎಲ್ಲವೂ ಸಿಕ್ಕಿದೆ ಎಂದವರ ಪ್ರಮಾಣ ಶೇ 21.

ಚಿಲ್ಲರೆ ಅಂಗಡಿ ಮೂಲಕ ಖರೀದಿ

ಎಲ್ಲವೂ ಸುಲಭವಾಗಿ ಸಿಕ್ಕಿತು ಎಂದವರ ಪ್ರಮಾಣ ಶೇ 38, ಹೆಚ್ಚಿನ ವಸ್ತುಗಳು ಸಿಕ್ಕಿವೆ ಎಂದವರ ಪ್ರಮಾಣ ಶೇ 30, ಕೆಲವು ವಸ್ತುಗಳು ಸಿಕ್ಕಿವೆ ಎಂದವರ ಪ್ರಮಾಣ ಶೇ 12, ಹೆಚ್ಚಿನ ವಸ್ತುಗಳು ಸಿಕ್ಕಿಲ್ಲ ಎಂದವರ ಪ್ರಮಾಣ ಶೇ 15, ಯಾವ ವಸ್ತುವೂ ಸಿಕ್ಕಿಲ್ಲ ಎಂದವರ ಪ್ರಮಾಣ ಶೇ 5.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು