ಭಾನುವಾರ, ಮೇ 16, 2021
22 °C
ಉಗ್ರರು ನುಸುಳಿರುವ ಶಂಕೆ ಹಿನ್ನೆಲೆಯಲ್ಲಿ ಕ್ರಮ

ತಮಿಳುನಾಡಿನ ಐದು ಕಡೆ ಎನ್‌ಐಎ ದಾಳಿ: ಮೊಬೈಲ್, ಲ್ಯಾಪ್‌ಟಾಪ್ ವಶ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಉಗ್ರರು ನುಸುಳಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಐದು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಬೆಳಿಗ್ಗೆ ದಾಳಿ ನಡೆಸಿದೆ.

ತಮಿಳುನಾಡು ಪೊಲೀಸರ ಜತೆ ಜಂಟಿ ದಾಳಿ ನಡೆಸಲಾಗಿದ್ದು ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಸಿಮ್‌ ಕಾರ್ಡ್‌ಗಳು ಮತ್ತು ಪೆನ್‌ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಲಷ್ಕರ್‌ ಇ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ 6 ಜನರ ತಂಡ ತಮಿಳುನಾಡಿಗೆ ನುಸುಳಿರುವ ಮಾಹಿತಿ ಇದೆ ಎಂದು ಭಾನುವಾರ (ಆಗಸ್ಟ್‌ 25ರಂದು) ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ, ದಕ್ಷಣ ಕನ್ನಡ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿತ್ತು.

ಇದನ್ನೂ ಓದಿ: ಎಲ್‌ಇಟಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಶಂಕೆ: ಕರಾವಳಿಯಲ್ಲಿ ಕಟ್ಟೆಚ್ಚರ​

ಜುಲೈನಲ್ಲಿಯೂ ತಮಿಳುನಾಡಿನ ಹಲವೆಡೆ ದಾಳಿ ನಡೆಸಿದ್ದ ಎನ್‌ಐಎ, ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುವುದಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದ ತಂಡವನ್ನು ಪತ್ತೆ ಮಾಡಿತ್ತು. ನಾಗಪಟ್ಟಣಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿಯೂ ಶೋಧ ನಡೆಸಿತ್ತು.

ಇನ್ನಷ್ಟು...

ಶ್ರೀಲಂಕಾ ಸ್ಫೋಟ: ಕೇರಳ– ತಮಿಳುನಾಡಿನಲ್ಲಿ ನಂಟು, ಮುಂದುವರಿದ ಎನ್‌ಐಎ ಶೋಧ

ಶ್ರೀಲಂಕಾದಲ್ಲಿ ಉಗ್ರ ಕೃತ್ಯ: ತನಿಖೆಯ ಜಾಡು ಹಿಡಿದು ಕಾಸರಗೋಡು ತಲುಪಿದ ಎನ್ಐಎ

ಹತ್ಯೆ ಸಂಚು: ಎನ್ಐಎ ದಾಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು