ಮಂಗಳವಾರ, ಏಪ್ರಿಲ್ 7, 2020
19 °C
ನಿರ್ಭಯಾ ಅತ್ಯಾಚಾರಿಗಳ ಅಂಗಾಂಗ ದಾನ

ನಿರ್ದೇಶನ ಕೋರಿ ‘ಸುಪ್ರೀಂ’ಗೆ ಪಿಐಎಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಲಿರುವ ನಾಲ್ವರ ಮೃತ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಒದಗಿಸಬೇಕು, ಅವರ ಅಂಗಾಂಗಗಳನ್ನು ದಾನ ಮಾಡುವಂತೆ ತಿಹಾರ್‌ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. 

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎಫ್‌. ಸಲ್ಡಾನಾ ಹಾಗೂ ವಕೀಲ ದಿಲ್‌ರಾಜ್‌ ರೋಹಿತ್‌ ಸಿಕ್ವೇರಿಯಾ ಈ ಅರ್ಜಿ ಸಲ್ಲಿಸಿದ್ದು, ಗಲ್ಲು ಶಿಕ್ಷೆಯ ಪ್ರತಿ ಪ್ರಕರಣದಲ್ಲೂ ಈ ನಿರ್ದೇಶನವನ್ನು ಪೂರ್ವ ನಿದರ್ಶನವನ್ನಾಗಿ ಪರಿಗಣಿಸುವಂತೆ ಸೂಚಿಸಬೇಕು ಎಂದು ಕೋರಿದ್ದಾರೆ.

ದೇಶದಲ್ಲಿ ಜಾರಿ ಇರುವ ನೀತಿಯ ಅನುಸಾರ ಅಂಗಾಂಗ ದಾನವು ಸ್ವಯಂ ಪ್ರೇರಿತವಾಗಿದೆ. ಆದರೆ, ಚೀನಾ ಮತ್ತಿತರ ದೇಶಗಳಲ್ಲಿ ಗಲ್ಲು ಶಿಕ್ಷೆಗೆ ಒಳಗಾಗುವವರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ಕಸಿ ಮಾಡಲು ಅವಕಾಶವಿದೆ. ಅಪರಾಧಿಗಳಿಗೆ ಅಂಗಾಂಗ ದಾನದ ಮೂಲಕ ಪಶ್ಚಾತ್ತಾಪಕ್ಕೆಅಂತಿಮ ಅವಕಾಶ ಕಲ್ಪಿಸಬೇಕು. ಅಗತ್ಯ ಇರುವವರಿಗೆ ಆ ಅಂಗಗಳನ್ನು ಕಸಿ ಮಾಡಿದಲ್ಲಿ ಸಹಾಯವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ನಾಲ್ವರಿಗೆ ಮಾರ್ಚ್‌ 3ರಂದು ಗಲ್ಲು ವಿಧಿಸುವಂತೆ ತೀರ್ಪು ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು