ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ತೆರೆ ಕಂಡಿತು ನಿರ್ಭಯಾ ಪ್ರಕರಣ: ಏನಂದರು ಗಣ್ಯರು?

Last Updated 20 ಮಾರ್ಚ್ 2020, 4:39 IST
ಅಕ್ಷರ ಗಾತ್ರ

ದೇಶದ ಪ್ರಮುಖ ಪ್ರಕರಣವು ಇಂದು ಅಂತ್ಯ ಕಂಡಿದೆ. ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಅತ್ಯಾಚಾರಿಗಳನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ ಇಂದು ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾಗಿದೆ.

ಈ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ ಕೆಲ ರಾಷ್ಟ್ರ ನಾಯಕರು ಹಾಗೂ ಗಣ್ಯರಿಂದಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌

ನ್ಯಾಯ ಒದಗಿಸಲು 7 ವರ್ಷ ಬೇಕಾಯಿತು. ಇದೇ ರೀತಿಯ ಘಟನೆ ಮತ್ತೆ ಸಂಭವಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ನಾವಿಂದು ತೆಗೆದುಕೊಳ್ಳಬೇಕಾಗಿದೆ. ಇತ್ತೀಚಿನವರೆಗೂ ಅಪರಾಧಿಗಳು ದೇಶದ ಕಾನೂನನ್ನು ಹೇಗೆ ದುರುಪಯೋಗಪಡಿಸಿಕೊಂಡು ಬಂದರೆಂದು ನಾವು ನೋಡಿದ್ದೇವೆ. ನಮ್ಮ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿವೆ.ನಾವು ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ.

ಪೂರ್ವ ದೆಹಲಿ ಕ್ಷೇತ್ರದ ಸಂಸದ ಗೌತಮ್‌ ಗಂಭೀರ್‌

ಅಂತಿಮವಾಗಿ! ಗಲ್ಲಿಗೇರಿಸಲಾಯಿತು! ಆದರೆ, ನಾವು ತಡಮಾಡಿದ್ದೇವೆಂದು ನಮಗೆ ಗೊತ್ತಿದೆ ನಿರ್ಭಯಾ

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್

ಇದು ಒಂದು ಐತಿಹಾಸಿಕ ದಿನ. ನಿರ್ಭಯಾ ಅವರಿಗೆ 7 ವರ್ಷಗಳ ನಂತರ ನ್ಯಾಯ ದೊರಕಿತು. ಅವರ ಆತ್ಮವು ಇಂದು ಶಾಂತಿಯನ್ನು ಕಂಡುಕೊಂಡಿರಬೇಕು. ನೀವು ಈ ಅಪರಾಧ ಮಾಡಿದರೆ ನಿಮ್ಮನ್ನು ಗಲ್ಲಿಗೇರಿಸಲಾಗುವುದು ಎಂದು ದೇಶವು ಅತ್ಯಾಚಾರಿಗಳಿಗೆ ಬಲವಾದ ಸಂದೇಶವನ್ನು ನೀಡಿದೆ

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಸರ್ಕಾರವು ದೇಶದ ಎಲ್ಲಾ ಹೆಣ್ಣುಮಕ್ಕಳಿಗೆ ನ್ಯಾಯವನ್ನು ಖಾತ್ರಿಪಡಿಸಿದೆ. ಈ ಘಟನೆಯು ಅತ್ಯಂತ ಶಕ್ತಿಯುತ ಉದಾಹರಣೆಯಾಗಿದ್ದು, ಬಲವಾದ ಸಂದೇಶ ರವಾನಿಸಿದೆ

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ

ಇದು ಒಂದು ಉದಾಹರಣೆಯಾಗಿದೆ. ಆದರೆ, ಇದು ಮೊದಲೇ ಆಗಬೇಕಿತ್ತು. ಅವರಿಗೆ ಶಿಕ್ಷೆ ಆಗುತ್ತದೆ ಎಂದು ಜನರಿಗೆ ಗೊತ್ತಿತ್ತು. ನೀವು ದಿನಾಂಕವನ್ನು ಮುಂದೂಡಬಹುದು. ಆದರೆ, ನಿಮಗೆ ಶಿಕ್ಷೆ ಖಂಡಿತ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT