ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಪಿಪಿಇ ಕಿಟ್‌ ಧರಿಸಿದ್ದ ನರ್ಸ್‌!

Last Updated 19 ಜೂನ್ 2020, 14:54 IST
ಅಕ್ಷರ ಗಾತ್ರ

ತಿರುವನಂತಪುರ:ಪಿಪಿಇ ಕಿಟ್‌ ಧರಿಸಿದ್ದ ದಾದಿಯೊಬ್ಬರು 30 ನಿಮಿಷಕ್ಕೂ ಹೆಚ್ಚು ಹೊತ್ತು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಘಟನೆ ಕೇರಳ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದಿದೆ.

ಪಿಪಿಇ ಕಿಟ್‌ ಧರಿಸಿ ಕೆಲಸ ಮಾಡುವುದೇ ಸವಾಲು ಎಂಬ ಅಭಿಪ್ರಾಯ ವೈದ್ಯಕೀಯ ಸಿಬ್ಬಂದಿಗಳಿಂದ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ,ಕೊಚ್ಚಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನರ್ಸ್‌ವೊಬ್ಬರು ಬುಧವಾರ ಈ ಸಮಸ್ಯೆ ಎದುರಿಸಿದ್ದಾರೆ.

ಈ ಸಂಬಂಧ, ಯಾವುದೇ ದೂರುಗಳು ಬಂದಿಲ್ಲ ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

‘ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿದ್ಯುತ್‌ ವ್ಯತ್ಯಯದಿಂದಾಗಿ ನರ್ಸ್‌ ಲಿಫ್ಟ್‌ನಲ್ಲೇ ಸಿಲುಕಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರ ಬಳಿ ಮೊಬೈಲ್‌ ಇರಲಿಲ್ಲ. ಪಿಪಿಇ ಕಿಟ್‌ ಧರಿಸಿದ್ದರಿಂದ ಬೆವರಿ, ಆಯಾಸಗೊಂಡಿದ್ದ ಅವರು ಕೂಗಿ ಬಾಗಿಲು ಬಡಿದಿದ್ದಾರೆ. ಅಲರಾಂ ಬಟನನ್ನು ಒತ್ತಿದ್ದಾರೆ, ಆದರೆ ಸಹಾಯಕ್ಕೆ ಅಲ್ಲಿ ಯಾರು ಇರಲಿಲ್ಲ. ಹೊರಗೆ ಬರಲು 30 ನಿಮಿಷ ಒದ್ದಾಡಿದ ನಂತರ ಅವರು ಮೂರ್ಛೆ ಹೋಗಿದ್ದರು. ಸಂಜೆ 6.30ರ ಹೊತ್ತಿಗೆ ಅವರಿಗೆ ಎಚ್ಚರವಾದಾಗ ಆಸ್ಪತ್ರೆಯ ವಾರ್ಡ್‌ನಲ್ಲಿದ್ದರು’ ಎಂದು ಹೆಸರು ಹೇಳಲು ಇಚ್ಚಿಸದ ನರ್ಸ್‌ವೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT