ಮಂಗಳವಾರ, ಜೂನ್ 2, 2020
27 °C

ಜೆಎನ್‌ಯು: ಸಾವರ್ಕರ್‌ ಫಲಕ ವಿರೂಪ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಜೆಎನ್‌ಯು ಕ್ಯಾಂಪಸ್‌ ಒಳಗೆ ಅಳವಡಿಸಿದ್ದ ವಿ.ಡಿ. ಸಾವರ್ಕರ್‌ ಮಾರ್ಗದ ನಾಮಫಲಕವನ್ನು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯವರು ವಿರೂಪಗೊಳಿಸಿದ್ದಾರೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಮಂಗಳವಾರ ಆರೋಪಿಸಿದೆ.

ಜೆಎನ್‌ಯು ಕ್ಯಾಂಪಸ್‌ ಒಳಗಿನ ಒಂದು ರಸ್ತೆಗೆ, ಹಿಂದುತ್ವ ವಿಚಾರಧಾರೆಯನ್ನು ಹೊಂದಿದ್ದ ಸಾವರ್ಕರ್‌ ಅವರ ಹೆಸರನ್ನಿಡಲಾಗಿದ್ದು, ಇದಕ್ಕೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆ (ಜೆಎನ್‌ಯುಎಸ್‌ಯು) ವಿರೋಧ ವ್ಯಕ್ತಪಡಿಸಿತ್ತು.

‘ರಸ್ತೆಗೆ ಸಾವರ್ಕರ್‌ ಅವರ ಹೆಸರನ್ನಿಡಲು ಜೆಎನ್‌ಯು ಆಡಳಿತವು ಕಳೆದ ವರ್ಷ ತೀರ್ಮಾನಿಸಿತ್ತು. ಅದರಂತೆ ನಾಮಫಲಕವನ್ನೂ ಅಳವಡಿಸಲಾಗಿತ್ತು. ಆದರೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯು ಅದನ್ನು ವಿರೂಪಗೊಳಿಸಿ, ಅದರ ಮೇಲೆ ‘ಮಹಮ್ಮದಲಿ ಜಿನ್ನಾ ಮಾರ್ಗ’ ಎಂಬ ಫಲಕ ಅಳವಡಿಸಿದೆ’ ಎಂದು ಎಬಿವಿಪಿ ಜೆಎನ್‌ಯು ಘಟಕದ ಅಧ್ಯಕ್ಷ ಶಿವಂ ಚೌರಾಸಿಯಾ ಆರೋಪಿಸಿದ್ದಾರೆ.

‘ಕೆಲವು ವಿದ್ಯಾರ್ಥಿಗಳು ‘ಸಾವರ್ಕರ್‌ ಮಾರ್ಗ’ ಎಂಬ ಫಲಕದ ಮೇಲೆ ಬಣ್ಣ ಬಳಿದು ಅದರ ಮೇಲೆ ‘ಅಂಬೇಡ್ಕರ್‌ ಮಾರ್ಗ’ ಎಂದು ಬರೆದಿದ್ದರು. ಸ್ವಲ್ಪ ಸಮಯದ ಬಳಿಕ ಅದೇ ಫಲಕದ ಮೇಲೆ ಇನ್ಯಾರೋ ಜಿನ್ನಾ ಹೆಸರಿನ ಫಲಕವನ್ನು ಹಾಕಿದ್ದರು’ ಎಂದು ಮೂಲಗಳು ತಿಳಿಸಿವೆ. ಜೆಎನ್‌ಯು ಆಡಳಿತವಾಗಲಿ, ವಿದ್ಯಾರ್ಥಿ ಸಂಘಟನೆಯಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು