ಸೋಮವಾರ, ಜೂನ್ 14, 2021
28 °C

ಒಡಿಶಾ| ಆರ್‌ಟಿಐ ಕಾರ್ಯಕರ್ತನ ಹತ್ಯೆ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಫುಲ್ಬನಿ (ಒಡಿಶಾ):  ಆರ್‌ಟಿಐ ಕಾರ್ಯಕರ್ತ ಅಭಿಮನ್ಯು ಪಾಂಡ ಹತ್ಯೆಗೆ ಸಂಬಂಧಿಸಿ ಇಲ್ಲಿನ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಂಧಮಾಲ್ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್‌ ಸಿಂಗ್‌, ‘ಆರೋಪಿಗಳ ಬಳಿ ಇದ್ದ ಕಾಟ್ರಿಜ್‌, ಬೈಕ್‌ ಮತ್ತು ಆರು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಾಗಿದೆ. ಹತ್ಯೆಗೆ ಹಳೆ ವೈಷಮ್ಯವೇ ಕಾರಣ’ ಎಂದು ತಿಳಿಸಿದರು.

ಡಿಸೆಂಬರ್‌ 10ರಂದು ಅಭಿಮನ್ಯು ಅವರನ್ನು ಬಲ್ಲಿಗುಡ ನಗರದಲ್ಲಿನ ಅವರ ಮನೆಯ ಬಳಿಯೇ ಹತ್ಯೆ ಮಾಡಲಾಗಿತ್ತು. ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಬಲ್ಲಿಗುಡದ ಜನ ರಾಷ್ಟ್ರೀಯ ಹೆದ್ದಾರಿ–59 ಅನ್ನು ಬಂದ್‌ ಮಾಡಿ ಪ್ರತಿಭಟಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು