ಶನಿವಾರ, ಜೂನ್ 6, 2020
27 °C

ಒಡಿಶಾ: ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಅನುಮತಿ, ಶೇ.50ರಷ್ಟು ಬೆಲೆ ಹೆಚ್ಚಳ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಒಡಿಶಾ: ಮದ್ಯದ ಬೆಲೆಯಲ್ಲಿ ಶೇ.50ರಷ್ಟು ಬೆಲೆ ಹೆಚ್ಚಿಸಿ ಒಡಿಶಾ ಸರ್ಕಾರ ಆದೇಶ ಹೊರಡಿಸಿದೆ. ವಿದೇಶಿ ಮದ್ಯದ ಮೇಲೆ 'ಕೋವಿಡ್ ವಿಶೇಷ ಶುಲ್ಕ'ವಾಗಿ ಈ ದರ ಹೆಚ್ಚಿಸಿದ್ದು, ಮದ್ಯಪ್ರಿಯರಿಗೆ ವಿದೇಶಿ ಮದ್ಯ ಸ್ವಲ್ಪ ದುಬಾರಿಯಾಗಿದೆ.

2019-20ರ ಎಂಆರ್ಪಿ ದರದಲ್ಲಿ ಶೇ.50ರಷ್ಟು ಬೆಲೆ ಹೆಚ್ಚಿಸಿದೆ. ಅಲ್ಲದೆ, ಕಂಟೈನ್ಮೆಂಟ್ ಝೋನ್ನ ಹೊರಗಿರುವ ಪರವಾನಗಿ ಹೊಂದಿರುವ ಅಂಗಡಿಗಳವರು ಮನೆ ಮನೆಗೆ ಮದ್ಯ ಸರಬರಾಜು ಮಾಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅಂಗಡಿಗಳಲ್ಲಿ ಅಥವಾ ಅಂಗಡಿಯ ಆವರಣದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಒಡಿಶಾ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.