ಬುಧವಾರ, ಫೆಬ್ರವರಿ 19, 2020
29 °C

ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Omar - Mufti

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಹೇರಿ ಬಂಧನದ ಅವಧಿ ವಿಸ್ತರಿಸಲಾಗಿದೆ.

ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಇವರನ್ನು 6 ತಿಂಗಳ ಕಾಲ ಬಂಧನದಲ್ಲಿರಿಸಲಾಗಿತ್ತು. ಬಂಧನ ಅವಧಿ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಗುರುವಾರ  ರಾತ್ರಿ ಪಿಎಸ್‌ಎ ಹೇರಿ ಮತ್ತೆ ಬಂಧನದಲ್ಲಿಡಲಾಗಿದೆ.

ಆಗಸ್ಟ್ 5ರಿಂದ ಹರಿ ನಿವಾಸದಲ್ಲಿ 49 ರ ಹರೆಯದ ಒಮರ್ ಗೃಹ ಬಂಧನದಲ್ಲಿದ್ದಾರೆ. ಗುರುವಾರ ರಾತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಇಲ್ಲಿಗೆ ಬಂದ ಮೆಜಿಸ್ಟ್ರೇಟ್ ಪಿಎಸ್‌ಎ ವಾರೆಂಟ್ ನೀಡಿದ್ದಾರೆ. 2009ರಿಂದ 2014ರ ಅವಧಿಯಲ್ಲಿ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು ಒಮರ್ ಅಬ್ದುಲ್ಲಾ. 

ಒಮರ್ ಅಬ್ದುಲ್ಲಾ ಅವರ ಅಪ್ಪ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಪಿಎಸ್‌ಎ ಹೇರಲಾಗಿತ್ತು. ಡಿಸೆಂಬರ್ ನಲ್ಲಿ ಅದನ್ನು  ಪರಿಶೀಲಿಸಿ ಬಂಧನ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿತ್ತು. 

ಸರ್ಕಾರಿ ಅತಿಥಿಗೃಹದಲ್ಲಿ ಗೃಹ ಬಂಧನಕ್ಕೊಳಗಾಗಿರುವ ಮೆಹಬೂಬಾ ಮುಫ್ತಿ ಅವರಿಗೂ ಇದೇ ರೀತಿ  ವಾರೆಂಟ್ ನೀಡಲಾಗಿದೆ. ಮುಫ್ತಿ ನೇತೃತ್ವದ ಪಿಡಿಪಿ ಮತ್ತು ಬಿಜೆಪಿ 2014ರಲ್ಲಿ ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡಿತ್ತು.  2018ರಲ್ಲಿ ಬಿಜೆಪಿ ದಿಢೀರನೆ ಬೆಂಬಲ ವಾಪಸ್ ಪಡೆದಿದ್ದು, ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಬಂದಿತ್ತು.
  
ಸರ್ಕಾರವು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ . ಇಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಯಾವುದಕ್ಕೂ ಬೆಲೆ ಇಲ್ಲ ಎಂದು  ಮುಫ್ತಿ ಅವರ ಮಗಳು ಇಲ್ತಿಜಾ  ಹೇಳಿದ್ದಾರೆ.

ಅದೇ ವೇಳೆ ನ್ಯಾಷನಲ್ ಕಾನ್ಫರೆನ್ಸ್  ಪಕ್ಷದ ನಾಯಕ ಅಲಿ ಮೊಹಮ್ಮದ್ ಸಾಗರ್ ಮತ್ತು  ಪಿಡಿಪಿ ನಾಯಕ ಸರ್ತಾಜ್ ಮಾಧ್ವಿ ವಿರುದ್ಧವೂ ಪಿಎಸ್‌ಎ ಹೇರಲಾಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು