ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯರೋಗ: ಉತ್ತರ ಪ್ರದೇಶದಲ್ಲಿ ಒಂದೇ ವರ್ಷ 4.10 ಲಕ್ಷ ಹೊಸ ಪ್ರಕರಣಗಳು

Last Updated 18 ಜನವರಿ 2019, 5:59 IST
ಅಕ್ಷರ ಗಾತ್ರ

ಚೆನ್ನೈ: ಉತ್ತರಪ್ರದೇಶದಲ್ಲಿ ಕಳೆದ ಒಂದೇ ವರ್ಷ ಅವಧಿಯಲ್ಲಿ 4.10 ಲಕ್ಷ ಕ್ಷಯರೋಗ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಮೀಕ್ಷೆಯಿಂದ ತಿಳಿದುಬಂದಿದೆ. ಅಂಕಿ ಅಂಶಗಳನ್ನು ನಿಕ್ಷಯ್‌ ವೆಬ್‌ಸೈಟ್‌ ಬಿಡುಗಡೆ ಮಾಡಿದೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ವರದಿಯಂತೆ 2018ರ ಜನವರಿ 01 ರಿಂದ ಡಿಸೆಂಬರ್‌ 31ರ ವರೆಗೆ ಒಟ್ಟು 21.32 ರಷ್ಟು ಹೊಸ ಪ್ರಕರಣಗಳು ದೇಶದಾದ್ಯಂತ ವರದಿಯಾಗಿವೆ. ಅದರಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ16,02,971 ಪ್ರಕರಣಗಳು ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು 5,29,310 ಪ್ರಕರಣಗಳು ಬೆಳಕಿಗೆ ಬಂದಿವೆ.

ದಕ್ಷಿಣದ ರಾಜ್ಯಗಳ ಪೈಕಿ ಅತಿಹೆಚ್ಚು(1.03 ಲಕ್ಷ) ಪ್ರಕರಣಗಳು ವರದಿಯಾಗಿರುವ ತಮಿಳುನಾಡು, ಹೆಚ್ಚು ಪ್ರಕರಣಗಳು ಕಾಣಿಸಿಕೊಂಡ ರಾಜ್ಯಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದಲ್ಲಿ 91,157, ಕರ್ನಾಟಕ 83,732, ತೆಲಂಗಾಣದಲ್ಲಿ 52,395ಮತ್ತು ಕೇರಳದಲ್ಲಿ 24,535 ಪ್ರಕರಣಗಳು ದಾಖಲಾಗಿವೆ.

ಅತಿಹೆಚ್ಚು ಪ್ರಕರಣಗಳು ಕಂಡು ಬಂಡ ರಾಜ್ಯಗಳು

01. ಉತ್ತರ ಪ್ರದೇಶ:4,10,448 ಪ್ರಕರಣಗಳು

02. ಮಹಾರಾಷ್ಟ್ರ:2,04,889 ಪ್ರಕರಣಗಳು

03. ರಾಜಸ್ಥಾನ:1,67,316ಪ್ರಕರಣಗಳು

04. ಮಧ್ಯ ಪ್ರದೇಶ:1,58,157ಪ್ರಕರಣಗಳು

05. ಗುಜರಾತ್‌:1,55,157ಪ್ರಕರಣಗಳು

06. ತಮಿಳುನಾಡು:1,03,360 ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT