ಬುಧವಾರ, ಜನವರಿ 29, 2020
29 °C

ನಿರುದ್ಯೋಗ ಹೆಚ್ಚಾದಲ್ಲಿ ಯುವಜನರು ಸಿಡಿದೇಳುವ ಸಾಧ್ಯತೆ ಇದೆ: ಪಿ. ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಿರುದ್ಯೋಗ ಹೆಚ್ಚಾಗಿ, ಆದಾಯ ಕುಸಿತಗೊಳ್ಳುತ್ತಿದ್ದರೆ ಯುವಜನರು ಮತ್ತು ವಿದ್ಯಾರ್ಥಿಗಳ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿರುವ ಅವರು, ‘ಕುಸಿಯುತ್ತಿರುವ ಆರ್ಥಿಕ ಸ್ಥಿತಿ ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿದೆ. ಸೋಮವಾರದ ಸರ್ಕಾರಿ ಅಂಕಿ–ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರವು 2019ರ ಡಿಸೆಂಬರ್‌ನಲ್ಲಿ ಶೇ 7.35ರಷ್ಟು ಏರಿದೆ. ಮುಖ್ಯವಾಗಿ ಆಹಾರ ಮತ್ತು ತರಕಾರಿಗಳ ಬೆಲೆ ಶೇ 60ರಷ್ಟು ಹೆಚ್ಚಳವಾಗಿವೆ. ಇದೇ ಬಿಜೆಪಿ ಭರವಸೆ ನೀಡಿದ್ದ ‘ಅಚ್ಛೇ ದಿನ್’ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು