ಭಾನುವಾರ, ಜೂಲೈ 5, 2020
27 °C
ಡ್ರೋನ್‌, ಟ್ರ್ಯಾಕ್ಟರ್‌ಗಳು, ಅಗ್ನಿಶಾಮಕ ವಾಹನಗಳ ಬಳಕೆ

ಮಿಡತೆಗಳ ನಿಯಂತ್ರಣಕ್ಕೆ ಕೀಟನಾಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಪಾರ ಸಂಖ್ಯೆಯಲ್ಲಿ ಲಗ್ಗೆ ಹಾಕುತ್ತಿರುವ ಮಿಡತೆಗಳನ್ನು ನಿಯಂತ್ರಿಸಲು ಡ್ರೋನ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು ಅಗ್ನಿಶಾಮಕ ವಾಹನಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ನಾಲ್ಕು ರಾಜ್ಯಗಳ 43 ಜಿಲ್ಲೆಗಳಿಗೆ ಮಿಡತೆಗಳು ಧಾವಿಸಿದ್ದು, ಹೂವು, ಬೆಳೆಗಳ ಎಲೆಗಳು ಮತ್ತು ತರಕಾರಿಗಳನ್ನು ತಿಂದು ನಾಶಪಡಿಸುತ್ತಿವೆ.

‘1993ರಲ್ಲಿ ಈ ರೀತಿ ಗುಂಪುಗಳಲ್ಲಿ ಮಿಡತೆಗಳು ಲಗ್ಗೆ ಹಾಕಿದ್ದವು. ರಾಜಸ್ಥಾನದ ಚೋಮುದಲ್ಲಿ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಮಧ್ಯಪ್ರದೇಶದ ಕೆಲ ಭಾಗಗಳಲ್ಲಿಯೂ ಡ್ರೋನ್‌ಗಳನ್ನು ಬಳಸಲಾಗುವುದು’ ಎಂದು ಕೃಷಿ ಸಚಿವಾಲಯದ ಸಸಿ ರಕ್ಷಣೆ ಮತ್ತು ಸಂಗ್ರಹ ವಿಭಾಗದ ಉಪನಿರ್ದೇಶಕ ಕೆ.ಎಲ್.‌ ಗುರ್ಜರ್‌ ತಿಳಿಸಿದ್ದಾರೆ.

‘47 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಿಡತೆ ನಿಯಂತ್ರಣಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸದ್ಯ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 8ರಿಂದ 10 ಗುಂಪುಗಳಿವೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗುಜರಾತ್‌, ಪಂಜಾಬ್‌ ಮತ್ತು ಉತ್ತರ ಪ್ರದೇಶಕ್ಕೂ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಜೈಪುರದಲ್ಲಿ ಮೊದಲು ಅಪಾರ ಸಂಖ್ಯೆಯಲ್ಲಿ ಧಾವಿಸಿದ ಮಿಡತೆಗಳು ಬಳಿಕ ಗಾಳಿಯ ದಿಕ್ಕಿಗೆ ಮಹಾರಾಷ್ಟ್ರದ ಅಮರಾವತಿಯತ್ತ ತೆರಳುತ್ತಿವೆ. ಮಿಡತೆಗಳು ಪ್ರತಿ ದಿನ 150 ಕಿ.ಮೀ ‌ದೂರ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸಂಜೆ ವೇಳೆಗೆ ಗಿಡಗಳು ಅಥವಾ ಜಮೀನುಗಳಲ್ಲಿ ವಾಸಿಸುತ್ತವೆ. ಗಾಳಿಯ ದಿಕ್ಕಿನ ಮೇಲೆಯೂ ಇವುಗಳ ಚಲಿಸುವ ಸಾಮರ್ಥ್ಯ ಅವಲಂಬನೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು