ಮೋದಿ 'ಎಕ್ಸ್‌ಪೈರಿ ಬಾಬು' : ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

ಮಂಗಳವಾರ, ಏಪ್ರಿಲ್ 23, 2019
33 °C

ಮೋದಿ 'ಎಕ್ಸ್‌ಪೈರಿ ಬಾಬು' : ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

Published:
Updated:

ಕೊಲ್ಕತ್ತ:  ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸ್ಪೀಡ್ ಬ್ರೇಕರ್ ಎಂದು ಕರೆದಿದ್ದಕ್ಕೆ ಮಮತಾ ತಿರುಗೇಟು ನೀಡಿದ್ದಾರೆ.

ಉತ್ತರ ಬಂಗಾಳದ ದಿನ್‍ಹತಾದಲ್ಲಿ ಮಾತನಾಡಿದ ಮಮತಾ 2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಮತ್ತೆ ಲೋಕಸಭಾ ಚುನಾವಣೆಗಳೇ ನಡೆಯಲ್ಲ. ಯಾಕೆಂದರೆ ಅವರು ಭಾರತದ ಸಂವಿಧಾನವನ್ನೇ ಬದಲಿಸುತ್ತಾರೆ ಎಂದಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ರಾಜಧಾನಿ ಕೊಲ್ಕತ್ತದಲ್ಲಿ ಒಂದರ ಹಿಂದೆ ಒಂದರಂತೆ ಬುಧವಾರ ರ‍್ಯಾಲಿ ನಡೆಸಿದ ಮೋದಿ, ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಮಮತಾ, ಮೋದಿ ನಿರಂಕುಶ ಅಧಿಕಾರಿ, ಕೋಮುವಾದಿ, ದಂಗೆಕೋರ ಮತ್ತು ಬಡವರ ವಿರೋಧಿ ಎಂದಿದ್ದಾರೆ.

ತಮ್ಮ ಭಾಷಣದುದ್ದಕ್ಕೂ ಮೋದಿಯವರನ್ನು ಹಲವಾರು ಬಾರಿ ಎಕ್ಸ್‌ಪೈರಿ ಬಾಬು ಎಂದು ಹೇಳಿದ ಮಮತಾ, ಅವರ ಈ ಅಧಿಕಾರ ಮುಗಿಯುವ ಹಂತದಲ್ಲಿದೆ ಎಂದಿದ್ದಾರೆ.

ಬಿಜೆಪಿ ಗೆದ್ದರೆ ಸಂವಿಧಾನವನ್ನೇ ಬದಲಾಯಿಸುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಅದೇ ಮಾತನ್ನು ಪುನರಾವರ್ತಿಸಿದ ಮಮತಾ, ಮೋದಿ ತಮ್ಮನ್ನು ದೇಶದ ಚೌಕೀದಾರ್ ಅಂತ ಹೇಳುತ್ತಿದ್ದಾರೆ. ಹೀಗಿರುವಾಗ ಪುಲ್ವಾಮಾದಲ್ಲಿ ನಮ್ಮ ಯೋಧರನ್ನು ರಕ್ಷಿಸಲು ಅವರಿಂದ ಯಾಕೆ ಸಾಧ್ಯವಾಗಿಲ್ಲ? ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆ ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಯಾಕೆ? ಸೇನೆಯನ್ನು ಮೋದಿ ಸೇನೆ ಎಂದು ಹೇಳುವ ಹಕ್ಕು ನಿಮಗೆ ಯಾರು ಕೊಟ್ಟಿದ್ದು? ಎಂದು ಮಮತಾ ಪ್ರಶ್ನಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !