ಪ್ರಿಯಾಂಕಾ ಚೋಪ್ರಾ ಮದುವೆ ಫೋಟೊ ಪ್ರಕಟಿಸಿಕೊಂಡ ಪ್ರಧಾನಿ ಮೋದಿ

7

ಪ್ರಿಯಾಂಕಾ ಚೋಪ್ರಾ ಮದುವೆ ಫೋಟೊ ಪ್ರಕಟಿಸಿಕೊಂಡ ಪ್ರಧಾನಿ ಮೋದಿ

Published:
Updated:

ನವದೆಹಲಿ: ಮಂಗಳವಾರ ದೆಹಲಿಯಲ್ಲಿ ನಡೆದ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನಸ್‌ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಪ್ರಕಟಿಸಿಕೊಂಡಿದ್ದಾರೆ. 

ಪ್ರಿಯಾಂಕಾ ಮತ್ತು ನಿಕ್‌ ವೈವಾಹಿಕ ಜೀವನಕ್ಕೆ ಶುಭಕೋರಿರುವ ಪ್ರಧಾನಿ ಮೋದಿ ಬುಧವಾರ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊ ಪ್ರಕಟಿಸಿರುವುದು ಪ್ರಿಯಾಂಕಾ ಅಭಿಮಾನಿಗಳ ಗಮನ ಸೆಳೆದಿದೆ. ಮೋದಿ ಕೈಜೋಡಿಸಿ ಶುಭಕೋರುತ್ತಿರುವುದು, ಪ್ರಿಯಾಂಕಾ–ನಿಕ್‌ ಸಹಾ ಕೈಜೋಡಿಸಿರುವುದನ್ನು ಚಿತ್ರದಲ್ಲಿ ಕಾಣಬಹುದು. 

 
 
 
 

 
 
 
 
 
 
 
 
 

Congratulations @priyankachopra and @nickjonas. Wishing you a happy married life.

A post shared by Narendra Modi (@narendramodi) on

ಕಳೆದ ವಾರ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಗಾಯಕ ನಿಕ್ ಜೋನಸ್ ವಿವಾಹ ಜೋಧಪುರದ ಉಮೈದ್‌ ಭವನ ಅರಮನೆಯಲ್ಲಿ ನೆರವೇರಿತ್ತು. ಬಳಿಕ ಮಂಗಳವಾರ ದೆಹಲಿಯ ತಾಜ್‌ ಪ್ಯಾಲೇಸ್‌ ಹೊಟೇಲ್‌ನಲ್ಲಿ ಆರತಕ್ಷತೆ ಸಮಾರಂಭ ಏರ್ಪಡಿಸಲಾಗಿತ್ತು. ಅಲ್ಲಿಗೆ ಗಣ್ಯರು ಮತ್ತು ಪ್ರಿಯಾಂಕ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು. ಪ್ರಿಯಾಂಕಾ ಸಹ ಪ್ರಧಾನಿ ಮೋದಿ ಶುಭಕೋರಿರುವ ಚಿತ್ರವನ್ನು ಪ್ರಕಟಿಸಿ, ಧನ್ಯವಾದ ತಿಳಿಸಿದ್ದಾರೆ. 

ಡಿಸೆಂಬರ್‌ 1ರಂದು ಕ್ರಿಶ್ಚಿಯನ್‌ ಸಂಪ್ರದಾಯದಂತೆ ಹಾಗೂ ಡಿಸೆಂಬರ್‌ 2ರಂದು ಹಿಂದೂ ಸಂಪ್ರದಾಯದಂತೆ ಪ್ರಿಯಾಂಕಾ–ನಿಕ್‌ ವಿವಾಹ ನಡೆದಿದೆ. 

 
 
 
 

 
 
 
 
 
 
 
 
 

And forever starts now... ❤️ @nickjonas

A post shared by Priyanka Chopra (@priyankachopra) on

 
 
 
 

 
 
 
 
 
 
 
 
 

And forever starts now... ❤️ @nickjonas

A post shared by Priyanka Chopra (@priyankachopra) on

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !