ಭಾನುವಾರ, ಜೂನ್ 20, 2021
28 °C

ಕೇದಾರನಾಥ ಅಭಿವೃದ್ಧಿ: ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಡೆಹ್ರಾಡೂನ್‌: ಕೇದಾರನಾಥ ಧಾಮ್‌ ಅಭಿವೃದ್ಧಿ ಮತ್ತು ಪುನರ್‌ ನಿರ್ಮಾಣ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲ ಕಾಮಗಾರಿಗಳು ಪರಿಸರ ಸ್ನೇಹಿ ಆಗಿರುವಂತೆ ನೊಡಿಕೊಳ್ಳಬೇಕು ಎಂದು ಬುಧವಾರ ಸೂಚಿಸಿದ್ದಾರೆ.

ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹಾಗೂ ಮುಖ್ಯ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ಜೊತೆ ವಿಡಿಯೊ ಮೂಲಕ ಮಾಹಿತಿ ಪಡೆದ ಮೋದಿ, ಯೋಜನೆ ಕಾಮಗಾರಿಗೆ ವೇಗ ನೀಡಬೇಕು ಮತ್ತು ಹಣಕಾಸಿದ ಕೊರತೆ ಇಲ್ಲ ಎಂದು ಭರವಸೆ ನೀಡಿದರು. 

ಉತ್ತರಾಖಂಡ್‌ದಲ್ಲಿ 2013ರಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಕೇದಾರನಾಥ ಕ್ಷೇತ್ರಕ್ಕೆ ಭಾರಿ ಹಾನಿ ಉಂಟಾಗಿತ್ತು. ಈ ಕ್ಷೇತ್ರದ ಅಭಿವೃದ್ಧಿ ಹಾಗೂ ಪುನರ್‌ ನಿರ್ಮಾಣ ಯೋಜನೆಗೆ 2017ರಲ್ಲಿ ಮೋದಿ ಚಾಲನೆ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು