ಸಾಧ್ವಿ ಪ್ರಗ್ಯಾ ಹೇಳಿಕೆಗೆ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ಒತ್ತಾಯ 

ಶುಕ್ರವಾರ, ಮೇ 24, 2019
29 °C

ಸಾಧ್ವಿ ಪ್ರಗ್ಯಾ ಹೇಳಿಕೆಗೆ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ಒತ್ತಾಯ 

Published:
Updated:

ನವದೆಹಲಿ: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಹುತಾತ್ಮ ಹೇಮಂತ್ ಕರ್ಕರೆ ಬಗ್ಗೆ ಹೇಳಿರುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಭಯೋತ್ಪಾದಕರ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ  ಮಾಡಿದ ಎಲ್ಲ ಯೋಧರನ್ನು ಸಾಧ್ವಿ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಇದನ್ನೂ ಓದಿಹೇಮಂತ್‌ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ: ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ

ಮೋದಿಯವರೇ, 26/11ರ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕರೆ ಅವರನ್ನು ದೇಶದ್ರೋಹಿ ಎನ್ನುವ ಅಪರಾಧವನ್ನು ಬಿಜೆಪಿ ನಾಯಕರು ಮಾತ್ರವೇ ಮಾಡಬಲ್ಲರು ಎಂದು ಸುರ್ಜೇವಾಲ ಟ್ವೀಟಿಸಿದ್ದಾರೆ.

ಭಯೋತ್ಪಾದನೆ ವಿರುದ್ದ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ಭಾರತೀಯ ಯೋಧರಿಗೆ ಮಾಡಿದ ಅವಮಾನ ಇದು. ನೀವು ದೇಶದ ಜನರ ಕ್ಷಮೆ ಕೋರಿ ಪ್ರಗ್ಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುರ್ಜೇವಾಲ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ಬಲಿದಾನಕ್ಕೆ ಗೌರವ ಕೊಡಿ: ಸಾಧ್ವಿ ಹೇಳಿಕೆ ಖಂಡಿಸಿದ ಐಪಿಎಸ್ ಅಧಿಕಾರಿಗಳ ಸಂಘ

ಹೇಮಂತ್ ಕರ್ಕರೆ ಹುತಾತ್ಮ, ಸಾಧ್ವಿ ಪ್ರಗ್ಯಾ ಹೇಳಿಕೆ ವೈಯಕ್ತಿಕ: ಬಿಜೆಪಿ

 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !