ಗುರುವಾರ , ಸೆಪ್ಟೆಂಬರ್ 19, 2019
24 °C

ಎರಡು ದಿನದ ಪ್ರವಾಸ: ಭೂತಾನ್‌ಗೆ ಬಂದಿಳಿದ ಪ್ರಧಾನಿ ಮೋದಿ 

Published:
Updated:

ಪಾರೊ: ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ಮಾತುಕತೆ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್‌ ಪ್ರವಾಸ ಕೈಗೊಂಡಿದ್ದು, ಶನಿವಾರ ಇಲ್ಲಿ ಬಂದಿಳಿದರು.

ಭೂತಾನ್‌ ಪ್ರಧಾನಿ ಲೊಟೆ ಶೆರಿಂಗ್‌ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು. ಬಳಿಕ ಮೋದಿ ಅವರು ರಾಜಧಾನಿ ಥಿಂಪುವಿಗೆ ತೆರಳಿದರು. ಇದು ಮೋದಿ ಅವರ ಎರಡನೇ ಭೂತಾನ್‌ ಭೇಟಿಯಾಗಿದೆ.

’ಪಾರೊನಿಂದ ಥಿಂಪುವಿಗೆ ತೆರಳುವ ದಾರಿಯಲ್ಲಿ ಜನರು ಭಾರತದ ತ್ರಿವರ್ಣ ಧ್ವಜ ಮತ್ತು ಭೂತಾನ್‌ ಧ್ವಜ ಹಿಡಿದು ಮೋದಿ ಅವರನ್ನು ಸ್ವಾಗತಿಸಿದರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಭೂತಾನ್‌ ಭೇಟಿಯು, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಹಾಗೂ ಜನರ ಸಮೃದ್ಧ ಭವಿಷ್ಯ ಮತ್ತು ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭೂತಾನ್‌ ರಾಜ ಜಿಗ್ಮೆ ಖೇಸರ್‌ ನಾಮ್‌ಗೇಲ್‌ ವಾಂಗ್‌ಚುಕ್‌ ಜೊತೆಗೆ ಮೋದಿ ಅವರು ಮಾತುಕತೆ ನಡೆಸುವರು.

 

Post Comments (+)