ಶನಿವಾರ, ಏಪ್ರಿಲ್ 4, 2020
19 °C

ಆಲ್ಕೋಹಾಲ್‌ ಎಂದು ಸ್ಯಾನಿಟೈಜರ್ ಕುಡಿದ ವಿಚಾರಣಾಧೀನ ಕೈದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಪಲಕ್ಕಾಡ್: ಸ್ಯಾನಿಟೈಜರ್ ಅನ್ನು ಆಲ್ಕೋಹಾಲ್ ಎಂದು ಕುಡಿದ ವಿಚಾರಣಧೀನ ಕೈದಿಯೊಬ್ಬರು ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.  

ಫೆಬ್ರುವರಿ 18ರಿಂದ ವಿಚಾರಣಧೀನ  ಕೈದಿಯಾಗಿ ಜೈಲಿನದ್ದಿದ್ದ ರಮಣ್‌ಕುಟ್ಟಿ ಎಂಬಾತ ಮಂಗಳವಾರ ಜೈಲಿನಲ್ಲಿ ಕುಸಿದುಬಿದ್ದಿದ್ದ. ಆತನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು

''ರಾಜ್ಯ ಸರ್ಕಾರದ ಸೂಚನೆಯಂತೆ ಜೈಲು ಆವರಣದಲ್ಲಿ (ಕೈದಿಗಳಿಂದ) ತಯಾರಿಸಿದ್ದ ಬಾಟಲಿಯಲ್ಲಿದ್ದ ಸ್ಯಾನಿಟೈಸರ್ ಅನ್ನು ಸೇವಿಸಿದ್ದಾರೆ ಎಂಬ ಅನುಮಾನವಿದೆ" ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಆರಾಮಾಗಿದ್ದ ಆತ ಬುಧವಾರ ರೋಲ್ ಕರೆಗೂ ಹಾಜರಾಗಿದ್ದ. ಆದರೆ ಬೆಳಗ್ಗೆ 10.30ರ ಸುಮಾರಿಗೆ ಕುಸಿದು ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜೈಲಿನ ಅಧಿಕಾರಿಗಳು ಐಸೊಪ್ರೊಪಿಲ್ ಆಲ್ಕೋಹಾಲ್ (ರಬ್ಬಿಂಗ್ ಆಲ್ಕೋಹಾಲ್‌) ಅನ್ನು ಹ್ಯಾಂಡ್ ಸ್ಯಾನಿಟೈಸರ್‌ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಸುತ್ತಿದ್ದರು. 

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು