ಮಿಷನ್ ಯುಪಿ: ಲಖನೌದಲ್ಲಿ ಪ್ರಿಯಾಂಕಾ ಮೆಗಾ ರ‍್ಯಾಲಿಗೆ ಕ್ಷಣಗಣನೆ

7

ಮಿಷನ್ ಯುಪಿ: ಲಖನೌದಲ್ಲಿ ಪ್ರಿಯಾಂಕಾ ಮೆಗಾ ರ‍್ಯಾಲಿಗೆ ಕ್ಷಣಗಣನೆ

Published:
Updated:

ಲಖನೌ: ಲಖನೌದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೆಗಾ ರ‍್ಯಾಲಿಗೆ ಕ್ಷಣಗಣನೆ ಆರಂಭವಾಗಿದೆ. ರ‍್ಯಾಲಿ ಆರಂಭಕ್ಕೆ ಮುನ್ನ ಹೊಸ ರಾಜಕಾರಣಕ್ಕೆ ತಮ್ಮೊಂದಿಗೆ ಕೈಜೋಡಿಸಲು ಮನವಿ ಮಾಡಿಕೊಂಡು ಪ್ರಿಯಾಂಕಾ ಭಾನುವಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್‍ನ ಶಕ್ತಿ ಆ್ಯಪ್ ಮೂಲಕ  ದನಿ ಸಂದೇಶವೊಂದನ್ನು ಕಳಿಸಿದ್ದಾರೆ.

ಸಂದೇಶದಲ್ಲಿ ಏನಿದೆ?
ನಮಸ್ಕಾರ, ನಾನು ಪ್ರಿಯಾಂಕಾ ಗಾಂಧಿ ವಾದ್ರಾ. ನಿಮ್ಮನ್ನು ಭೇಟಿಯಾಗಲು ನಾನು ನಾಳೆ ಲಖನೌಗೆ ಬರುತ್ತಿದ್ದೇನೆ. ನಾವು ಜತೆಯಾಗಿ ಹೊಸ ರಾಜಕಾರಣವನ್ನು ಆರಂಭಿಸುತ್ತಿದ್ದು ಅದರಲ್ಲಿ ನೀವೆಲ್ಲರೂ ಪಾಲುದಾರರಾಗಿರುತ್ತೀರಿ.  ನನ್ನ ಯುವ ಸ್ನೇಹಿತರು, ನನ್ನ ಸಹೋದರಿಯರು ಮತ್ತು ಸಮಾಜದಲ್ಲಿನ ದುರ್ಬಲ ವರ್ಗದವರ ದನಿಯೂ ಕೇಳುವಂತಾಗಬೇಕು. ಬನ್ನಿ ನನ್ನ ಜತೆ ಸೇರಿ ಹೊಸ ಭವಿಷ್ಯ, ಹೊಸ ರಾಜಕಾರಣವನ್ನು ಆರಂಭಿಸೋಣ,  ಧನ್ಯವಾದಗಳು.

ವಕ್ತ್ ಹೈ ಬದಲಾವ್ ಕಾ 
ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶಕ್ಕೆ ಆಗಮಿಸುತ್ತಿರುವ ಬಗ್ಗೆ ಪಕ್ಷದ ಕಾರ್ಯಕರ್ತರು ಉತ್ಸುಕರಾಗಿದ್ದಾರೆ.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಶುಭಕೋರಿ ಬ್ಯಾನರ್ ಮತ್ತು ಹೋರ್ಡಿಂಗ್ ಗಳನ್ನು ಸ್ಥಾಪಿಸಲಾಗಿದೆ. ರಸ್ತೆ ಬದಿಯಲ್ಲಿ ವಕ್ತ್ ಹೈ ಬದಲಾವ್ ಕಾ (ಬದಲಾವಣೆಯ ಸಮಯ) ಎಂಬ ಹೋರ್ಡಿಂಗ್ ಗಳು ರಾರಾಜಿಸುತ್ತಿವೆ.

ರಾಹುಲ್ ಟ್ವೀಟ್ 
ಲಖನೌದಲ್ಲಿ ಪ್ರಿಯಾಂಕಾ ವಾದ್ರಾ ಮತ್ತು  ಜೋತಿರಾಧಿತ್ಯ ಸಿಂಧ್ಯಾ ಜತೆ ತಾನು ರ‍್ಯಾಲಿಯಲ್ಲಿ ಭಾಗವಹಿಸುತ್ತೇನೆ ಎಂದು  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಧ್ಯಾಹ್ನ ಹೊತ್ತಿಗೆ ರ‍್ಯಾಲಿ ಆರಂಭವಾಗಲಿದ್ದು ಲಖನೌ ವಿಮಾನ ನಿಲ್ದಾಣದಿಂದ ಪಕ್ಷದ ಪ್ರಧಾನ ಕಚೇರಿವರೆಗೆ ರ‍್ಯಾಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !