‘ಮೋದಿ: ₹30 ಲಕ್ಷ ಕೋಟಿ ಸಾಲ’

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಅರ್ಥ ವ್ಯವಸ್ಥೆಯನ್ನು ಧ್ವಂಸ ಮಾಡಿದೆ. ನರೇಂದ್ರ ಮೋದಿ ಅವರ 57 ತಿಂಗಳ ಆಳ್ವಿಕೆಯಲ್ಲಿ ದೇಶದ ಸಾಲವು ಸುಮಾರು ₹30 ಲಕ್ಷ ಕೋಟಿಯಷ್ಟು ಹೆಚ್ಚಿದೆ. ದೇಶವನ್ನು ಸಾಲದ ವಿಷವೃತ್ತಕ್ಕೆ ತಳ್ಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಹಣಕಾಸು ಸಚಿವಾಲಯದ ದಾಖಲೆಗಳನ್ನು ಮುಂದಿಟ್ಟು ಈ ಆರೋಪ ಮಾಡಿದ್ದಾರೆ.
2014ರ ಮಾರ್ಚ್‌ನಿಂದ 2018ರ ಡಿಸೆಂಬರ್ ಅವಧಿಯಲ್ಲಿ ದೇಶದ ಸಾಲವು ಶೇ 57ರಷ್ಟು ಹೆಚ್ಚಳವಾಗಿದೆ. ಸಾಲದ ಮೊತ್ತ ₹83.40 ಲಕ್ಷ ಕೋಟಿಗೆ ಏರಿದೆ. 2014ರ ಮಾರ್ಚ್ ಹೊತ್ತಿಗೆ ದೇಶದ ಸಾಲವು ₹53.11 ಲಕ್ಷ ಕೋಟಿ ಇತ್ತು. ಮೋದಿ ಅವರು 4 ವರ್ಷ 9 ತಿಂಗಳಲ್ಲಿ ₹30.28 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದರು. ಮೋದಿ ಆಡಳಿತದಲ್ಲಿ ಒಬ್ಬೊಬ್ಬ ಪ್ರಜೆಯ ತಲೆ ಮೇಲೆ ₹23,300 ಹೆಚ್ಚುವರಿ ಸಾಲದ ಹೊರೆ ಬಿದ್ದಿದೆ ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.