ಸುಪ್ರೀಂಕೋರ್ಟ್‌ ನೀಡಿದ್ದ ರಕ್ಷಣೆಯ ಭರವಸೆ ಪರಿಗಣಿಸದೆ ತೇಲ್ತುಂಬ್ಡೆ ಬಂಧನ

7

ಸುಪ್ರೀಂಕೋರ್ಟ್‌ ನೀಡಿದ್ದ ರಕ್ಷಣೆಯ ಭರವಸೆ ಪರಿಗಣಿಸದೆ ತೇಲ್ತುಂಬ್ಡೆ ಬಂಧನ

Published:
Updated:

ಮುಂಬೈ: ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಸುಪ್ರೀಂಕೋರ್ಟ್‌ ನಾಲ್ಕು ವಾರಗಳ ಗಡುವು ನೀಡಿರುವುದನ್ನೂ ಲೆಕ್ಕಿಸದೆ ಪುಣೆ ಪೊಲೀಸರು ದಲಿತ ಚಿಂತಕ, ಭೀಮಾ ಕೋರೆಗಾಂವ್ ಹಿಂಸಾಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನ ಆರೋಪಿ ಆನಂದ್ ತೇಲ್ತುಂಬ್ಡೆ ಅವರನ್ನು ಶನಿವಾರ ನಸುಕಿನ 3.30ಕ್ಕೆ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು.

ತೇಲ್ತುಂಬ್ಡೆ ಅವರ ಜಾಮೀನು ಅರ್ಜಿಯನ್ನು ನಿನ್ನೆಯಷ್ಟೇ (ಫೆ.1) ಪುಣೆಯ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ತಳ್ಳಿಹಾಕಿತ್ತು. ತನಿಖಾಧಿಕಾರಿಗಳು ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

‘ತೇಲ್ತುಂಬ್ಡೆ ಅವರ ಜಾಮೀನು ತಿರಸ್ಕೃತಗೊಂಡಿರುವ ಕಾರಣ ಅವರನ್ನು ಬಂಧಿಸುತ್ತಿದ್ದೇವೆ’ ಎಂದು ಅವರನ್ನು ವಶಕ್ಕೆ ಪಡೆದುಕೊಂಡ ಇನ್‌ಸ್ಪೆಕ್ಟರ್ ಇಂದುಲ್ಕರ್ ಹೇಳಿದ್ದಾರೆ. ‘ನಾಲ್ಕು ವಾರಗಳ ಕಾಲ ತೇಲ್ತುಂಬ್ಡೆ ಅವರನ್ನು ಬಂಧಿಸುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹೀಗಾಗಿ ಇದು ಅಕ್ರಮ ಬಂಧನ’ ಎಂದು ತೇಲ್ತುಂಬ್ಡೆ ಅವರ ವಕೀಲ ಪ್ರದೀಪ್ ಮಂಧ್ಯನ್ ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಪೊಲೀಸರು ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡಬೇಕು ಎಂದು ಕೋರಿ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ನಾಲ್ಕು ವಾರಗಳ ಕಾಲ ಅವರನ್ನು ಬಂಧಿಸುವಂತಿಲ್ಲ ಎಂದು ಜ.14ರಂದು ಹೇಳಿತ್ತು.

ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಆಗ್ರಹ

ಆನಂದ್‌ ತೇಲ್ತುಂಬ್ಡೆ ಬಂಧನವನ್ನು ಖಂಡಿಸಿರುವ ವಿಶ್ವದ ವಿವಿಧೆಡೆ ಕಾರ್ಯನಿರತವಾಗಿರುವ 92 ಸಂಘಸಂಸ್ಥೆಗಳ ಪದಾಧಿಕಾರಿಗಳು, 51 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ, ನೋಮ್ ಚಾಮ್ಸ್ಕ್‌ ಸೇರಿದಂತೆ ಆರು ಮಂದಿ ಚಿಂತಕರು ಈ ಪ್ರಕರಣದಲ್ಲಿ ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !