ಶುಕ್ರವಾರ, ಮಾರ್ಚ್ 5, 2021
24 °C

ಚೌಕೀದಾರ್ ಚೋರ್ ಹೈ, ನಾವು ಮುಂದಿಟ್ಟ ಹೆಜ್ಜೆ ಹಿಂದಿಡಲಾರೆವು: ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ನಾನು ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಿಯಾಂಕಾ ಮತ್ತು ಸಿಂಧ್ಯಾ ಅವರಿಗೆ ಜವಾಬ್ದಾರಿ ನೀಡಿದಾಗ, ಉತ್ತರ ಪ್ರದೇಶದಲ್ಲಿ ಈಗಿರುವ ಬಿಜೆಪಿ ಸರ್ಕಾರದ ಅನ್ಯಾಯದ ವಿರುದ್ಧ ಹೋರಾಡುವಂತೆ ಹೇಳಿದ್ದೇನೆ ಎಂದಿದ್ದಾರೆ ರಾಹುಲ್ ಗಾಂಧಿ.

ಲಖನೌದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ವೇಳೆ ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮುಂದಿಟ್ಟ ಹೆಜ್ಜೆಯನ್ನು ನಾವು ಹಿಂದಿಡಲಾರೆವು. ನಮ್ಮ ಗುರಿ ಲೋಕಸಭಾ ಚುನಾವಣೆ ಆಗಿದ್ದರೂ, 2022ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಗೆಲ್ಲುವ ದೊಡ್ಡ ಗುರಿ ನಮ್ಮ ಮುಂದಿದೆ ಎಂದು ನಾನು ಪ್ರಿಯಾಂಕಾ ಮತ್ತು ಸಿಂಧ್ಯಾಗೆ ಹೇಳಿದ್ದೇನೆ ಎಂದಿದ್ದಾರೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ದೇಶದ ಚೌಕೀದಾರ ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯ ಮತ್ತು ವಾಯುಪಡೆಯಿಂದ ಹಣ ಕದ್ದಿದ್ದು  ಚೌಕೀದಾರ್ ಚೋರ್ ಹೈ ಎಂದಿದ್ದಾರೆ. 

 ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರಾಹುಲ್ ಜತೆ ಪ್ರಿಯಾಂಕಾ ಗಾಂಧಿ ರೋಡ್ ಶೋ
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು