56 ಇಂಚು ಎದೆಯ ಬಾಕ್ಸರ್, ಅವರ ಕೋಚ್ ಅಡ್ವಾಣಿ ಮುಖಕ್ಕೆ ಗುದ್ದಿದ್ದಾರೆ: ರಾಹುಲ್

ಶುಕ್ರವಾರ, ಮೇ 24, 2019
26 °C

56 ಇಂಚು ಎದೆಯ ಬಾಕ್ಸರ್, ಅವರ ಕೋಚ್ ಅಡ್ವಾಣಿ ಮುಖಕ್ಕೆ ಗುದ್ದಿದ್ದಾರೆ: ರಾಹುಲ್

Published:
Updated:

ಭಿವಾನಿ: ಸಾರ್ವಜನಿಕರ ಭಾರೀ ಜೈಕಾರದೊಂದಿಗೆ 56 ಇಂಚು ಎದೆಯ  ಬಾಕ್ಸರ್ ಚುನಾವಣಾ ಕಣಕ್ಕೆ ಬಂದಿದ್ದಾರೆ.  ರೈತರ ಸಮಸ್ಯೆ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ದ ಹೋರಾಡುವ ಬದಲು ಆ ಬಾಕ್ಸರ್, ಅವರ ತರಬೇತುದಾರ ಲಾಲ್ ಕೃಷ್ಣ ಅಡ್ವಾಣಿ ಅವರ ಮುಖಕ್ಕೆ ಮೊದಲು ಗುದ್ದಿದ್ದಾರೆ. ಬಾಕ್ಸರ್ ಸ್ಪರ್ಧಾ ಕಣಕ್ಕೆ ಇಳಿದು ಮೊದಲು ಅಡ್ವಾಣಿ ಅವರತ್ತ ನೋಡಿದರು. ಅವರ ಮುಖಕ್ಕೆ ಮೊದಲು ಗುದ್ದಿದರು. ಆನಂತರ ತಂಡದ ಇತರ ಸದಸ್ಯರಾದ ನಿತಿನ್ ಗಡ್ಕರಿ ಮತ್ತು  ಅರುಣ್ ಜೇಟ್ಲಿಗೆ ಗುದ್ದಿದರು. ಆಮೇಲೆ ರಿಂಗ್‌ನಿಂದ ಹೊರ ಬಂದ ಬಾಕ್ಸರ್ ಸಾರ್ವಜನಿಕರ ನಡುವೆ ಬಂದು ಜಿಎಸ್‌ಟಿ ಮತ್ತು ನೋಟು ರದ್ದತಿ ಮೂಲಕ ಸಣ್ಣ ವ್ಯಾಪಾರಿಗಳಿಗೆ ಹೊಡೆತ ನೀಡಿದರು. ರೈತರು ಮುಖಾಮುಖಿಯಾದಾಗ ಅವರ ಪರ ಹೋರಾಡುವುದನ್ನು ಬಿಟ್ಟು ಅವರಿಗೂ ಗುದ್ದಿದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಚೌಧರಿ ಪರ ಚುನಾವಣಾ ಪ್ರಚಾರ ಮಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು 56 ಇಂಚು ಬಾಕ್ಸರ್ ಎಂದಿದ್ದಾರೆ. ದೇಶದ ಜನರ ಸಮಸ್ಯೆಗಳನ್ನು ಪರಿಹರಿಸಲು ಹೋರಾಡುತ್ತೇನೆ ಎಂಬ ಭರವಸೆ ನೀಡಿ ಅಧಿಕಾರಕ್ಕೇರಿದ ಮೋದಿ, ಜಿಎಸ್‌ಟಿ ಮತ್ತು ನೋಟು ರದ್ದತಿ ಮಾಡಿ ದೇಶದ ರೈತರ ಮತ್ತು ವ್ಯಾಪಾರಿಗಳಿಗೆ ಗುದ್ದು ನೀಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಜಿಲ್ಲೆ ಭಿವಾನಿ. ಇದು ಜಗತ್ತಿನ ಬಾಕ್ಸಿಂಗ್ ರಾಜಧಾನಿ ಆಗಲಿದೆ ಎಂದು ಹೇಳಿದ ರಾಹುಲ್,  2014ರ ಲೋಕಸಭಾ ಚುನಾವಣೆಯಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ದೇಶದ ಜನರು 56 ಇಂಚು ಎದೆಯ ಬಾಕ್ಸರ್‌ನ್ನು ಆಯ್ಕೆ ಮಾಡಿದ್ದರು ಎಂದಿದ್ದಾರೆ.

5 ವರ್ಷಗಳನ್ನು ಪೂರೈಸಿದ ಮೋದಿ ಸರ್ಕಾರಕ್ಕೆ ತಾವು ಯಾವುದಕ್ಕಾಗಿ ಹೋರಾಡುತ್ತಿದ್ದೇವೆ ಎಂಬುದೇ ಗೊತ್ತಿಲ್ಲ. ಮೋದಿಜೀ, ನೀವು ದೇಶದ ಜನರ ವಿರುದ್ಧ ಹೋರಾಡಬಾರದು. ನೀವು ವಿಪಕ್ಷಗಳ ವಿರುದ್ಧವೂ ಹೋರಾಡುವಂತಿಲ್ಲ. ನೀವು ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ.ಆದರೆ ನೀವು ಅದರಲ್ಲಿ ವಿಫಲರಾಗಿದ್ದೀರಿ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಪ್ರಜೆಗೂ ₹15 ಲಕ್ಷ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಮೋದಿ ವಿರುದ್ಧ ಕಿಡಿ ಕಾರಿದ ರಾಹುಲ್, ಇಂಥದೊಂದು ಕಾರ್ಯ ಈ ದೇಶದಲ್ಲಿ ಸಾಧ್ಯವೇ ಇಲ್ಲ.ಆದರೆ NYAY ಯೋಜನೆ (ಕನಿಷ್ಟ ಆದಾಯ) ಬಗ್ಗೆ ನಾವು ಉನ್ನತ ಆರ್ಥಿಕ ಸಲಹೆಗಾರರಲ್ಲಿ ಸಲಹೆ ಕೇಳಿದ್ದು, ಅವರು ಈ ಬಗ್ಗೆ ಅಭಿಪ್ರಾಯ ಹೇಳಲು ನಾಲ್ಕು ತಿಂಗಳು ತೆಗೆದುಕೊಂಡರು. ದೇಶದ ಆರ್ಥಿಕತೆಯನ್ನು ಗಮನಿಸಿದರೆ  25 ಕೋಟಿ ಮಂದಿಗೆ ಪ್ರತಿ ವರ್ಷ ₹72,000 ನೀಡುವುದು ಸಾಧ್ಯ ಎಂದು ಅವರು ಹೇಳಿದ್ದರು ಎಂದಿದ್ದಾರೆ ರಾಹುಲ್. 

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !