ಮಂಗಳವಾರ, ಜನವರಿ 28, 2020
29 °C

ಮುಂದಿನ ವಾರ ರಾಜಕೀಯ ನಡೆ ಪ್ರಕಟಿಸಲಿರುವ ರಾಜ್‌ ಠಾಕ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬದಲಾಗುತ್ತಿರುವ ರಾಜಕೀಯ ಸಮೀಕರಣಗಳು ಮತ್ತು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಸೈದ್ಧಾಂತಿಕ ಬದಲಾವಣೆಗಳ ನಡುವೆ, ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಅವರು ತಮ್ಮ ರಾಜಕೀಯದ ಮುಂದಿನ ನಡೆಯ ಬಗ್ಗೆ ಮುಂದಿನ ವಾರ ಪ್ರಕಟಿಸಲಿದ್ದಾರೆ.

51 ವರ್ಷ ವಯಸ್ಸಿನ ವರ್ಚಸ್ವಿ ನಾಯಕ, ಪ್ರಚೋದನಕಾರಿಯಾಗಿ ಭಾಷಣ ಮಾಡುವ ರಾಜ್‌  ಅವರು, ಜನವರಿ 23 ರಂದು ನಡೆಯುವ ಶಿವಸೇನಾ ಸಂಸ್ಥಾಪಕ ಮತ್ತು ಅವರ ಚಿಕ್ಕಪ್ಪ ದಿವಂಗತ ಬಾಳಾಸಾಹೇಬ್‌ ಠಾಕ್ರೆ ಅವರ 94 ಜನ್ಮದಿನಾಚರಣೆಯಂದು ತಮ್ಮ ನಿಲುವನ್ನು ಪ್ರಕಟಿಸಲಿದ್ದಾರೆ ಎಂದು ಎಂಎನ್‌ಎಸ್‌ ಉಪಾಧ್ಯಕ್ಷ ಡಾ. ವಾಗೀಶ್‌ ಸಾರಸ್ವತ್‌ ತಿಳಿಸಿದ್ದಾರೆ.

ಶಿವಸೇನಾದಲ್ಲಿಯೇ ಇದ್ದ ರಾಜ್‌ ಅವರು, ತಮ್ಮ ಸೋದರ ಸಂಬಂಧಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಹೊರಬಂದು, ಎಂಎನ್‌ಎಸ್‌ ರಚಿಸಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು