ರಾಜಸ್ಥಾನ: ಎರಡು ಕ್ಷೇತ್ರಗಳಲ್ಲಿ ಸಿಪಿಎಂ ಮುನ್ನಡೆ

7

ರಾಜಸ್ಥಾನ: ಎರಡು ಕ್ಷೇತ್ರಗಳಲ್ಲಿ ಸಿಪಿಎಂ ಮುನ್ನಡೆ

Published:
Updated:

ಜೈಪುರ: ಬಿಜೆಪಿ ಅಧಿಕಾರವಿರುವ ರಾಜಸ್ಥಾನದಲ್ಲಿ ಸಿಪಿಎಂ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, 10,000ಕ್ಕಿಂತಲೂ ಹೆಚ್ಚು ಮತಗಳಿಸುತ್ತೇವೆ ಎಂದು ಸಿಪಿಎಂ ವಿಶ್ವಾಸ ವ್ಯಕ್ತ ಪಡಿಸಿದೆ. ಆದಾಗ್ಯೂ, ಇಲ್ಲಿ ಎರಡು ಸೀಟು ಗೆಲ್ಲುವುದು ಬಹುತೇಕ ನಿಚ್ಚಳವಾಗಿದೆ. ಈ ಬಾರಿ 28 ಕ್ಷೇತ್ರಗಳಲ್ಲಿ ಸಿಪಿಎಂ ಕಣಕ್ಕಿಳಿದಿತ್ತು.

ಭದ್ರಾ ಕ್ಷೇತ್ರದಲ್ಲಿ ಬಲ್ವಾನ್ ಮತ್ತು ಧುಂಗ್ರಾ ಕ್ಷೇತ್ರದಲ್ಲಿ ಗಿರಿಧರ್ ಲಾಲ್  ಭಾರಿ ಮುನ್ನಡೆ ಸಾಧಿಸಿದ್ದಾರೆ.

2008ರಲ್ಲಿ ಸಿಪಿಎಂಗೆ ಉತ್ತಮ ಬೆಂಬಲ ಸಿಕ್ಕಿತ್ತು. ಧೋದ್, ದಾಂತರಂಗಾಡ್, ಅನೂಪ್ ನಗರ್ ಮೊದಲಾದ ಕ್ಷೇತ್ರಗಳಲ್ಲಿ ಸಿಪಿಎಂ ಗೆಲುವು ಸಾಧಿಸಿತ್ತು.

ರೈತರು ಸಿಪಿಎಂ ಪರವಾಗಿ ನಿಂತಿರುವುದೇ ಇಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿದ್ದು, ಈ ಬಾರಿ ಸಿಪಿಎಂ ಹಲವಾರು ರೈತ ಪರ ಹೋರಾಟಗಳನ್ನು ನಡೆಸಿತ್ತು. ರೈತರ ಸಾಲ ಮನ್ನಾ, ರೈತರಿಗೆ ನೀರಿನ ಸೌಕರ್ಯ ಒದಗಿಸುವುದು, ಹೆಚ್ಚಿಸಿದ ವಿದ್ಯುತ್ ದರದ ವಿರುದ್ಧ ಸಿಪಿಎಂ ಪ್ರತಿಭಟನೆ ನಡೆಸಿತ್ತು. ರೈತರ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ವಸುಂಧರಾ ರಾಜೇ ₹50,000 ವರೆಗಿನ ಸಾಲ  ಮನ್ನಾ ಮಾಡಿದ್ದರು. ಈ ರೀತಿಯ ರೈತ ಪರ ಹೋರಾಟದಿಂದಾಗಿ ರೈತರು ಇಲ್ಲಿ ಸಿಪಿಎಂ ಕೈ ಹಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !