ಭಾನುವಾರ, ಡಿಸೆಂಬರ್ 8, 2019
20 °C

ಸಮವಸ್ತ್ರಕ್ಕೆ ಆಕ್ಷೇಪ: ಮಿಲಿಟರಿ ಶೈಲಿ ಟೋಪಿ ಕೈ ಬಿಟ್ಟ ರಾಜ್ಯಸಭಾ ಮಾರ್ಷಲ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Screengrab

ನವದೆಹಲಿ: ರಾಜ್ಯಸಭೆಯ ಮಾರ್ಷಲ್‌ಗಳಿಗೆ ಮಿಲಿಟರಿ ಶೈಲಿಯ ಸಮವಸ್ತ್ರ ಮತ್ತು ಟೋಪಿ ನೀಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದ್ದರು.

ಇದನ್ನೂ ಓದಿ:  ರಾಜ್ಯಸಭೆ ಮಾರ್ಷಲ್‌ಗಳ ಹೊಸ ಸಮವಸ್ತ್ರದ ಬಗ್ಗೆ ಆಕ್ಷೇಪ: ಪರಾಮರ್ಶೆಗೆ ಒಪ್ಪಿಗೆ

ಮಾರ್ಷಲ್‌ಗಳ ಸಮವಸ್ತ್ರ ಬಗ್ಗೆ ಆಕ್ಷೇಪ ಕೇಳಿ ಬಂದಿದ್ದರಿಂದ ಟೋಪಿ ಧರಿಸುವುದನ್ನು  ನಿಲ್ಲಿಸಲಾಗಿದೆ. ಗುರುವಾರ ಮಾರ್ಷಲ್‌ಗಳು ಟೋಪಿ ಧರಿಸದೆ ಸದನಕ್ಕೆ ಬಂದಿದ್ದರು. ಮಾರ್ಷಲ್‌ಗಳು  ಟೋಪಿ ಇಲ್ಲದೆ ಬಂದಿರುವುದನ್ನು ರಾಜ್ಯಸಭಾ ಸದಸ್ಯರೊಬ್ಬರು ಎಲ್ಲರ ಗಮಕ್ಕೆ ತಂದರು.

ಸೋಮವಾರದಿಂದ ಆರಂಭವಾದ ಕಲಾಪದಲ್ಲಿ ಸಾಂಪ್ರದಾಯಿಕ ದಿರಿಸಿನ ಬದಲಾಗಿ ಮಾರ್ಷಲ್‌ಗಳು ತಿಳಿನೀಲಿ ಬಣ್ಣದ ಸಮವಸ್ತ್ರ ಧರಿಸಿದ್ದರು.

ಇದನ್ನೂ ಓದಿ: ಮಾರ್ಷಲ್‌ಗಳ ಹೊಸ ಸಮವಸ್ತ್ರ ಪರಿಶೀಲನೆ

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು