ಬುಧವಾರ, ಫೆಬ್ರವರಿ 26, 2020
19 °C

ಅತ್ಯಾಚಾರವನ್ನು ಶ್ರೀರಾಮನಿಂದಲು ತಡೆಯಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಿಯಾ (ಉತ್ತರ ಪ್ರದೇಶ): ಅತ್ಯಾಚಾರಗಳು ನೈಸರ್ಗಿಕ ಮಾಲೀನ್ಯವಿದ್ದಂತೆ, ಶ್ರೀರಾಮನಿಂದಲು ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ ಸಿಂಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಬರಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುರೇಂದ್ರ ನಾರಾಯಣ ಸಿಂಗ್‌ ಅವರು ’ನಾನು ಈ ಮಾತನ್ನು ತುಂಬಾ ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ, ಹೆಚ್ಚುತ್ತಿರುವ ಅತ್ಯಾಚಾರ ಘಟನೆಗಳನ್ನು ತಡೆಯಲು ಶ್ರೀರಾಮನಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ. 

ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ಸಾರ್ವಜನಿಕರ ಜವಾಬ್ದಾರಿಯು ಬಹು ಮುಖ್ಯವಾಗಿದೆ. ಬೇರೆಯವರ ಹೆಣ್ಣು ಮಕ್ಕಳನ್ನು ನಮ್ಮ ಮನೆಯ ಅಕ್ಕ ತಂಗಿಯರಂತೆ ಭಾವಿಸಿದಾಗ ಮಾತ್ರ ಅತ್ಯಾಚಾರಗಳನ್ನು ನಿಯಂತ್ರಿಸಬಹುದು. ಇಂತಹ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆ ಹೊರತು ಸಂವಿಧಾನದಿಂದ ಅತ್ಯಾಚಾರಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಉನ್ನೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀತಾಪುರ ಕ್ಷೇತ್ರದ ಶಾಸಕ ಕುಲದೀಪ್ ಸಿಂಗ್‌ ಅವರು ಜೈಲು ಸೇರಿದ್ದಾರೆ. ಅವರನ್ನು ಸಮರ್ಥಿಸುವ ಹೇಳಿಕೆ ನೀಡಿ ಈ ಹಿಂದೆ ಸುರೇಂದ್ರ ನಾರಾಯಣ ಸಿಂಗ್‌ ಸುದ್ದಿಯಾಗಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು