ಶನಿವಾರ, ಜನವರಿ 16, 2021
21 °C

‘ಸಕಾಲದಲ್ಲಿ ವಿದ್ಯುತ್ ಬಿಲ್‌ ಪಾವತಿಸಿ, ಬಹುಮಾನ ಗೆಲ್ಲಿ!‘

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಸ್ಥಿತಿ ಹಿನ್ನೆಲೆಯಲ್ಲಿ ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿ ಹಾಗೂ ಸ್ವಯಂ ಮೀಟರ್‌ ರೀಡಿಂಗ್‌ಗೆ ಉತ್ತೇಜನ ನೀಡಲು ದೆಹಲಿಯಲ್ಲಿ ಗ್ರಾಹಕರಿಗೆ ವಿವಿಧ ಉತ್ತೇಜನ ಕ್ರಮಗಳನ್ನು ಘೋಷಿಸಲಾಗಿದೆ.

ಜೂನ್ 30, 2020ರ ಒಳಗೆ ಪಾವತಿಸುವ ಬಿಲ್‌ಗಳ ಮೇಲೆ ₹ 220ರವರೆಗೂ ರಿಯಾಯಿತಿ ಸಿಗಲಿದೆ. ಬಿಲ್ ತಲುಪಿದ ಏಳು ದಿನಗಳಲ್ಲಿ ಹಣ ಪಾವತಿಸಿಸಬೇಕು, ಸ್ವಯಂ ಮೀಟರ್ ಓದಿಕೊಳ್ಳಬೇಕು ಎಂಬುದಷ್ಟೇ ಷರತ್ತು ಎನ್ನುತ್ತಾರೆ ದೆಹಲಿ ವಿದ್ಯುತ್‌ ಪ್ರಸರಣ ನಿಗಮದ ಅಧಿಕಾರಿಯೊಬ್ಬರು.

₹ 10 ಸಾವಿರದವರೆಗಿನ ಆನ್‌ಲೈನ್‌ ಬಿಲ್‌ ಪಾವತಿಗೆ ಯಾವುದೇ ಶುಲ್ಕ ಇರುವುದಿಲ್ಲ. ಮೇ 31, 2020ರವರೆಗೆ ಯಾವುದೇ ಬಾಕಿ ಉಳಿಸಿಕೊಳ್ಳದ ಗ್ರಾಹಕರು ‘ಪೇ ಬಿಲ್‌, ವಿನ್‌’ ಯೋಜನೆಯಡಿ ಟಿ.ವಿ, ಮೊಬೈಲ್‌ ಫೋನ್ ಸೇರಿ ಹಲವು ಬಹುಮಾನ ಗೆಲ್ಲುವ ಅವಕಾಶಗಳನ್ನು ಪಡೆಯಲಿದ್ದಾರೆ ಎಂದು ಡಿಇಆರ್‌ಸಿ ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು