ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆಗಳ ಪುನರಾರಂಭ: ಸುರಕ್ಷತೆ ಪಾಲಿಸಲು ಸೂಚನೆ

ನಿರ್ದೇಶನಗಳನ್ನು ಹೊರಡಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ
Last Updated 10 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ (): ಲಾಕ್‌ಡೌನ್‌ನ ಹಲವು ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಕಾರ್ಖಾನೆಗಳನ್ನು ಪುನರ್‌ ಆರಂಭಿಸುವಾಗ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ಕುರಿತು ಹೊಸ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆಯಿಂದ 11 ಮಂದಿ ಮೃತಪಟ್ಟಿದ್ದರಿಂದ ಸರ್ಕಾರ ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈ ಸೂಚನೆಗಳನ್ನು ನೀಡಿದೆ.

ಮೊದಲ ವಾರ ಪರೀಕ್ಷಾರ್ಥ ಕಾರ್ಖಾನೆ ಅರಂಭಿಸಬೇಕು. ಈ ಅವಧಿಯಲ್ಲಿ ಅತಿ ಹೆಚ್ಚಿನ ಉತ್ಪಾದನೆಯ ಗುರಿಯನ್ನು ಇರಿಸಿಕೊಳ್ಳಬಾರದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ (ಎನ್‌ಡಿಎಂಎ) ಹೊರಡಿಸಿರುವ ನಿರ್ದೇಶನದಲ್ಲಿ ತಿಳಿಸಲಾಗಿದೆ.

ಲಾಕ್‌ಡೌನ್‌ನಿಂದ ಪೈಪ್‌ಲೈನ್‌, ವಾಲ್ವ್‌ಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ರಾಸಾಯನಿಕಗಳ ಅಂಶಗಳು ಉಳಿದಿರುವ ಸಾಧ್ಯತೆಗಳಿವೆ. ಈ ರಾಸಾಯನಿಕ ಅಂಶಗಳು ಮತ್ತು ತ್ಯಾಜ್ಯಗಳು ಅಪಾಯ ಸೃಷ್ಟಿಸಬಹುದಾಗಿದ್ದರಿಂದ ಎಚ್ಚರ ಅಗತ್ಯ ಎಂದು ತಿಳಿಸಿದೆ.

ಕಾರ್ಖಾನೆಗಳ ಮರುಆರಂಭಕ್ಕೆ ಮುನ್ನ ಇಡೀ ಘಟಕವನ್ನು ಸುರಕ್ಷತೆಯ ಪರಿಶೀಲನೆಗೆ ಒಳಪಡಿಸಬೇಕು. ಕಾರ್ಖಾನೆಯಲ್ಲಿ ಯಾವುದೇ ರೀತಿಯ ಅಪಾಯ ಸಂಭವಿಸುವುದನ್ನು ಗ್ರಹಿಸುವ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT