ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ರಿಯಾಜ್‌ ನೈಕೂ ಹತ್ಯೆ ಬಳಿಕ ಹಿಜ್ಬುಲ್‌ನ ಹೊಸ ಕಮಾಂಡರ್ ಸೈಫುಲ್ಲಾ ಹೈದರ್‌

Last Updated 11 ಮೇ 2020, 6:37 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರರ ಸಂಘಟನೆಯ ಕಮಾಂಡರ್‌ ಆಗಿ ಕಾಡುತ್ತಿದ್ದ ರಿಯಾಜ್ನೈಕೂ ಹತ್ಯೆಯ ಬಳಿಕ ಇದೇ ಸಂಘಟನೆಯ ಮತ್ತೊಬ್ಬ ಉಗ್ರ ಸೈಫುಲ್ಲಾಮಿರ್ ಘಾಜೀ ಹೈದರ್‌ನನ್ನು ಹಿಜ್ಬುಲ್‌ನ ಮುಖ್ಯಸ್ಥನಾಗಿ ನೇಮಕ ಮಾಡಲಾಗಿದೆಎಂದು ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

26 ವರ್ಷದ ಸೈಫುಲ್ಲಾ ಹೈದರ್‌ ಕಳೆದ 6 ವರ್ಷಗಳ ಹಿಂದೆ ರಿಯಾಜ್ನೈಕೂ ಮೂಲಕ ಹಿಜ್ಬುಲ್‌ ಮುಜಾಹಿದ್ದೀನ್ ಸಂಘಟನೆಸೇರಿದ್ದನು. ಪಾಕ್‌ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ನಲ್ಲಿ ಸಕ್ರಿಯವಾಗಿರುವ ಹಿಜ್ಬುಲ್‌ನವಕ್ತಾರ ಸಲೀಂ ಹಶ್ಮಿ ಈ ಘೋಷಣೆ ಮಾಡಿದ್ದಾನೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಪ ಕಮಾಂಡರ್‌ ಆಗಿ ಸಲೀಂ ಹಶ್ಮಿ ಕೆಲಸ ಮಾಡುತ್ತಿದ್ದಾನೆ. ಇವನಿಗೆ ಮತ್ತೊಬ್ಬ ಉಗ್ರ ಅಬು ತಾರಿಖ್‌ ಮಿಲಿಟರಿ ಸಲಹೆಗಾರನಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಐದು ದಿನಗಳ ಹಿಂದೆ ರಿಯಾಜ್‌ ನೈಕೂಹಾಗೂ ಅವನ ಸಹಾಯಕ ಅದಿಲ್‌ ಅಹಮ್ಮದ್‌ನನ್ನು ಕಾಶ್ಮೀರದಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ.

ಸೈಫುಲ್ಲಾ‌ ಹೈದರ್‌ನನ್ನು 'ಮುಜೀಬ್‌' ಮತ್ತು 'ಡಾಕ್ಟರ್‌ ಸೈಫ್'‌ ಎಂದು ಸಹ ಕರೆಯಲಾಗುತ್ತದೆ. ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಉಗ್ರರಿಗೆ ಸೈಫುಲ್ಲಾ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ ಆಗಾಗಿಅವನನ್ನು ಡಾಕ್ಟರ್‌ ಸೈಫ್‌ ಎಂದು ಕರೆಯಲಾಗುತ್ತದೆ. ದಕ್ಷಿಣ ಕಾಶ್ಮೀರದ ಫುಲ್ವಾಮಾ ಜಿಲ್ಲೆಯವನಾದ ಸೈಫುಲ್ಲಾ ದ್ವೀತಿಯ ಪಿಯುಸಿ ಪಾಸಾಗಿದ್ದಾನೆ. ಇವನಮಾರ್ಗದರ್ಶಕ ಹಾಗೂ ಹತನಾಗಿರುವಉಗ್ರರಿಯಾಜ್‌ ನೈಕೂಪದವಿ ಪಡೆದಿದ್ದಾನೆ.

ಕಾಲೇಜು‌ ವಿದ್ಯಾಭ್ಯಾಸದ ಬಳಿಕ ಸರ್ಕಾರದ ವೃತ್ತಿಪರಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾನೆ. ಹಾಗೇ ಪುಲ್ವಾಮಾದ ಐಟಿಐ ಸಂಸ್ಥೆಯಲ್ಲಿ ಬಯೋ ಮೆಡಿಕಲ್‌ ಶಿಕ್ಷಣವನ್ನು ಪಡೆದಿದ್ದಾನೆ. ಶ್ರೀನಗರದ ಎನ್‌ಐಇಟಿಯಲ್ಲಿ ಟೆಕ್ನಿಶಿಯನ್‌ ಆಗಿ ಉದ್ಯೋಗಪಡೆದುಕೊಂಡಿದ್ದ. ಇಲ್ಲಿ ಮೂರು ವರ್ಷ ಕೆಲಸ ಮಾಡಿದ ಸೈಫುಲ್ಲಾ ಹೈದರ್‌, ರಿಯಾಜ್‌ ನೈಕೂಪರಿಚಯವಾದ ಬಳಿಕ ಅವನಿಂದ ಪ್ರಭಾವಿತನಾಗಿ ಕೆಲಸ ತೊರೆದು ಉಗ್ರ ಸಂಘಟನೆ ಸೇರಿದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಅಧಿಕಾರಿಗಳು ಸೈಫುಲ್ಲಾ ಹೈದರ್‌ನನ್ನು ’ಎ’ ಕೆಟಗರಿ ಉಗ್ರ ಎಂದು ವರ್ಗಿಕರಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಗಳಾದ ಪುಲ್ವಾಮಾ, ಕುಲ್‌ಗಾಮ್‌, ಸೋಪಿಯಾನ್‌ನಲ್ಲಿ ಉಗ್ರ ಚಟುವಟಿಕೆಗಳ ಮೂಲಕ ಸಕ್ರಿಯನಾಗಿದ್ದಾನೆ. ಹತ ಉಗ್ರ ರಿಯಾಜ್‌ ನೈಕೂಗೆ ಆಪ್ತನಾಗಿದ್ದು ಅವನಕಾರ್ಯ ಚಟುವಟಿಕೆ, ಇತರೆಸಂಪರ್ಕದ ಮಾಹಿತಿಗಳನ್ನು ತಿಳಿದಿರುವ ಸೈಫುಲ್ಲಾ ಹಣ್ಣಿನ ಮಾಲೀಕರಿಂದ ಹಣ ಲೂಟಿ ಮಾಡುವುದು ಹಾಗೂ ಆಕ್ರಮವಾಗಿಅಫೀಮು ಸರಬರಾಜು ಮಾಡಿ ಹಿಜ್ಬುಲ್‌ಗೆಹಣ ಸಂಗ್ರಹ ಮಾಡುತ್ತಿದ್ದಾನೆ.

ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರ ಸಂಘಟನೆ ಭಯೋತ್ಪಾನೆ ಜೊತೆಗೆ ಮಾದಕ ವಸ್ತುಗಳ ಮಾರಾಟದಲ್ಲೂ ಸಕ್ರಿಯವಾಗಿದೆ ಎಂದು ಕಾಶ್ಮೀರದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಪ್ರಿಲ್‌ 25ರಂದುಹಿಜ್ಬುಲ್‌ ಮುಜಾಹಿದ್ದೀನ್ ಸಂಘಟನೆಗೆಹಣ ಸಂಗ್ರಹ ಮಾಡಿದ್ದ ಹಿಲಾಲ್‌ ಅಹಮ್ಮದ್‌ ವಾಘೆಯನ್ನು ಪಂಜಾಬ್‌ ಪೊಲೀಸರು ಬಂಧಿಸಿ 29 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು. ಈ ಹಣವನ್ನು ಹತ ಉಗ್ರ ರಿಯಾಜ್‌ ನೈಕೂಗೆ ತಲುಪಿಸಲು ಸಂಗ್ರಹಿಸಿದ್ದಾಗಿ ಹಿಲಾಲ್‌ ಅಹಮ್ಮದ್‌ ತಿಳಿಸಿದ್ದ ಎಂದು ರಾಷ್ಟ್ತೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT