ಶನಿವಾರ, ಮಾರ್ಚ್ 6, 2021
18 °C

ವಾಹಿನಿಯಲ್ಲಿ ನೇರ ಪ್ರಸಾರ: ಚರ್ಚೆಯಲ್ಲಿ ಹೊಡೆದಾಡಿದ ಬಿಜೆಪಿ, ಎಸ್‌ಪಿ ವಕ್ತಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಶನಿವಾರ ಜೀ ಟಿವಿ ಸ್ಟುಡಿಯೊದಲ್ಲಿ ರಾಜಕೀಯ ಚರ್ಚೆ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೋರಿಯಾ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೊಡೆದಾಡಿಕೊಂಡ ಘಟನೆ ನಡೆದಿದೆ.

ವಾಹಿನಿಯಲ್ಲಿ ನೇರ ಪ್ರಸಾರದ ವೇಳೆ ರಾಜಕೀಯ ವಕ್ತಾರರಿಬ್ಬರು ಈ ರೀತಿ ಹೊಡೆದಾಡಿಕೊಂಡಿದ್ದು, ಆ ವಿಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಈ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ವಕ್ತಾರರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಚರ್ಚೆ ವಾಗ್ವಾದಕ್ಕೆ ತಿರುಗಿದಾಗ ಭದೋರಿಯಾ ಭಾಟಿಯಾರನ್ನು ತಳ್ಳಿದ್ದಾರೆ. ಇಬ್ಬರೂ ಪರಸ್ಪರ ಜಗಳವಾಡಿಕೊಂಡಾಗ ಸ್ಟುಡಿಯೊದಲ್ಲಿದ್ದವರು ಜಗಳ ಬಿಡಿಸಲು ಯತ್ನಿಸಿದ್ದಾರೆ.

ಈ  ಪ್ರಕರಣದ ಬಗ್ಗೆ ಪ್ರತ್ರಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ನೋಯ್ಡಾದ ಸೆಕ್ಟರ್ 16-Aಯಲ್ಲಿ ಇರುವ ಸುದ್ದಿ ವಾಹಿನಿಯ ಸ್ಟುಡಿಯೊದಲ್ಲಿ ರಾಜಕೀಯ ನಾಯಕರಿಬ್ಬರು ಜಗಳವಾಡಿದ್ದು, ಬಿಜೆಪಿ ವಕ್ತಾರ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಪ್ರಕಾರ ಭದೋರಿಯಾ ಅವರನ್ನು ವಶ ಪಡಿಸಿಕೊಂಡಿದ್ದು, ಈ ವಿಡಿಯೊ ದೃಶ್ಯಗಳನ್ನು ಪೊಲೀಸರಿಗೆ ನೀಡುವಂತೆ ವಾಹಿನಿಗೆ ಆದೇಶಿಸಲಾಗಿದೆ ಎಂದಿದ್ದಾರೆ.

ಏತನ್ಮಧ್ಯೆ, ಭದೋರಿಯಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಸುರೇಂದ್ರ ಸಿಂಗ್ ನಾಗರ್ ಆರೋಪಿಸಿದ್ದಾರೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು