ಶುಕ್ರವಾರ, ಏಪ್ರಿಲ್ 23, 2021
22 °C

ಸಿತಾಪುರ್‌ ಜೈಲಿಗೆ ಸಂಸದ ಆಜಂಖಾನ್‌, ಪತ್ನಿ, ಪುತ್ರ ಸ್ಥಳಾಂತರ

ಪಿಟಿಐ Updated:

ಅಕ್ಷರ ಗಾತ್ರ : | |

ಸಿತಾಪುರ್: ರಾಂಪುರ್‌ ಕೋರ್ಟ್‌ನಲ್ಲಿ ಶರಣಾಗಿದ್ದ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್‌, ಅವರ ಪತ್ನಿ, ಪುತ್ರನನ್ನು ಸಿತಾಪುರ್‌ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಅವರನ್ನು ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಭೇಟಿಯಾದರು.

ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಯಾದವ್‌, ‘ಪಕ್ಷದ ಸಂಸದನನ್ನು ಗುರಿಯಾಗಿಸಿ ಬಿಜೆಪಿ ಕೆಲಸ ಮಾಡುತ್ತಿದೆ. ಇದು ರಾಜಕೀಯ ಷಡ್ಯಂತ್ರವಾಗಿದೆ’ ಎಂದು ಆರೋಪಿಸಿದರು.

‘ಆಜಂ ಸಾಹೇಬ್‌ರನ್ನು ಭೇಟಿಯಾಗಿದ್ದೆ. ಅವರ ಪತ್ನಿ ಆರೋಗ್ಯ ಸರಿಯಾಗಿಲ್ಲ. ಪುತ್ರನ ಕೈಗೂ ಪೆಟ್ಟಾಗಿದೆ. ಜೈಲು ಆಡಳಿತ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲಿದೆ ಎಂದು ಭಾವಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಜಂ ಖಾನ್‌ರನ್ನು ಗುರಿಯಾಗಿಸಿದೆ. ನ್ಯಾಯಾಲಯ ಅವರ ನೆರವಿಗೆ ಬರಲಿದೆ ಎಂದು ಆಶಿಸುತ್ತೇನೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು