ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ: ನವೆಂಬರ್ 13ಕ್ಕೆ ಮೇಲ್ಮನವಿ ವಿಚಾರಣೆ 

Last Updated 23 ಅಕ್ಟೋಬರ್ 2018, 7:41 IST
ಅಕ್ಷರ ಗಾತ್ರ

ನವದೆಹಲಿ: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಮತ್ತು ರಿಟ್ ಅರ್ಜಿಗಳ ವಿಚಾರಣೆ ನವೆಂಬರ್ 13ರಂದು ನಡೆಯಲಿದೆ.ಶಬರಿಮಲೆಯಲ್ಲಿ ಮಂಡಲಕಾಲ ಪೂಜೆ ಆರಂಭವಾಗುವ ಮುನ್ನ ಈ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.ನವೆಂಬರ್ 17ಕ್ಕೆ ಮಂಡಲಕಾಲ ಪೂಜೆ ಆರಂಭವಾಗಲಿದೆ.

ಮುಂಬೈ ಮಲಯಾಳಿಗಳ ಸಂಘಟನೆಯಾದ ರಾಷ್ಟ್ರೀಯ ಅಯ್ಯಪ್ಪ ಭಕ್ತಜನ ಮಹಿಳಾ ಸಂಘ, ಜಯ ರಾಜಕುಮಾರ್ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದರು.
ಪ್ರವೇಶ ನಿಷೇಧಿಸಲ್ಪಟ್ಟ ಯಾವುದೇ ಮಹಿಳೆ ತಮಗೆ ದೇಗುಲಕ್ಕೆ ಪ್ರವೇಶಿಸಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿಲ್ಲ. ಸುಪ್ರೀಂಕೋರ್ಟ್‍ನ ಈ ತೀರ್ಪು ಅಯ್ಯಪ್ಪ ಭಕ್ತರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT