ಮಂಗಳವಾರ, ಆಗಸ್ಟ್ 20, 2019
25 °C

ಕಡತ ತಿದ್ದಿದ ಕೋರ್ಟ್ ಸಿಬ್ಬಂದಿ ಅಮಾನತು

Published:
Updated:

ನವದೆಹಲಿ : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಅವರ ಖುದ್ದು ಹಾಜರಿಗೆ ಸೂಚನೆ ನೀಡಿದ್ದ ತನ್ನ ಆದೇಶವನ್ನು ತಿರುಚಿದ ಆರೋಪದ ಮೇಲೆ ಇಬ್ಬರು ಕೋರ್ಟ್ ಸಿಬ್ಬಂದಿಯನ್ನು ಸುಪ್ರೀಂಕೋರ್ಟ್ ಗುರುವಾರ ಅಮಾನತುಗೊಳಿಸಿದೆ. 

ಆದೇಶದ ಪ್ರತಿಯನ್ನು ತಿರುಚಿ, ಅದನ್ನು ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದ ನೌಕರರನ್ನು ಕೆಲಸದಿಂದ ತೆಗೆದುಹಾಕುವಂತೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಸೂಚಿಸಿದ್ದಾರೆ.

ಅಂಬಾನಿ ಖುದ್ದು ಹಾಜರಾಗಬೇಕು ಎಂಬ ವಿಷಯವೇ ಆದೇಶದ ಪ್ರತಿಯಲ್ಲಿ ಕಾಣುತ್ತಿಲ್ಲ ಎಂದು ನ್ಯಾಯಮೂರ್ತಿ ಆರ್‌.ಎಫ್. ನಾರಿಮನ್ ಅವರು ಗೊಗೊಯಿ ಅವರಿಗೆ ದೂರು ನೀಡಿದ್ದರು.

Post Comments (+)