ಮಂಗಳವಾರ, ಮೇ 26, 2020
27 °C

ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ನೀಡಿದ್ದ ರಜೆ ಮುಂದೂಡಿದ ದೆಹಲಿ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗಲಭೆ ಪೀಡಿತ ಈಶಾನ್ಯ ದೆಹಲಿಯ ಎಲ್ಲ ಶಾಲೆಗಳ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್‌ 7ರವರೆಗೆ ಮುಂದೂಡಲು ದೆಹಲಿ ಸರ್ಕಾರ ನಿರ್ಧರಿಸಿದೆ. 

ಈಶಾನ್ಯ ದೆಹಲಿಯ ಎಲ್ಲ ಶಾಲೆಗಳು ಮಾರ್ಚ್‌ 7ರವರೆಗೆ ಆರಂಭವಾಗುವುದಿಲ್ಲ ಎಂದು  ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಶನಿವಾರ ತಿಳಿಸಿದ್ದಾರೆ. 

ಫೆಬ್ರುವರಿ 29ರವರೆಗೆ ಶಾಲೆಗಳನ್ನು ಕಾರ್ಯ ನಿರ್ವಹಿಸುವುದಿಲ್ಲವೆಂದು ಈ ಹಿಂದೆ ತಿಳಿಸಲಾಗಿತ್ತು.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಶಿಕ್ಷಣ ನಿರ್ದೇಶನಾಲಯ, ‘ಗಲಭೆ ಪೀಡಿತ ಪ್ರದೇಶದಲ್ಲಿ ಪರೀಕ್ಷೆಗಳನ್ನು ನಡೆಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ. ಇಂತಹ ಸಮಯದಲ್ಲಿ ಪರೀಕ್ಷೆ ಬರೆಯುವ ಮಕ್ಕಳ ಮನಸ್ಥಿತಿ  ಉದ್ವಿಗ್ನಗೊಂಡಿರುತ್ತದೆ. ಪರೀಕ್ಷೆ ಸಿದ್ದತೆ ನಡೆಸಲು ಅವರಲ್ಲಿ ಏಕಾಗೃತೆಯ ಕೊರತೆ ಇರುತ್ತದೆ. ಆ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ’ ಎಂದು ತಿಳಿಸಿದೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು