ಬೂತ್‌ನಲ್ಲಿ ಸೆಲ್ಫಿ: ದೂರು ದಾಖಲು

ಸೋಮವಾರ, ಏಪ್ರಿಲ್ 22, 2019
31 °C

ಬೂತ್‌ನಲ್ಲಿ ಸೆಲ್ಫಿ: ದೂರು ದಾಖಲು

Published:
Updated:

ಡೆಹರಾಡೂನ್‌: ಉತ್ತಾರಾಖಂಡ ರಾಜ್ಯದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ 14 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ.

ನೀತಿ ಸಂಹಿತೆ ಉಲ್ಲಂಘಿಸಿದವರಲ್ಲಿ ಹೆಚ್ಚಿನವರು ಮತದಾನ ಮಾಡುತ್ತಿದ್ದಾಗ ಮತಯಂತ್ರವೂ ಕಾಣಿಸುವಂತೆ ಸೆಲ್ಫಿ ತೆಗೆದು, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದವರಾಗಿದ್ದಾರೆ.

ನೈನಿತಾಲ್‌, ಉಧಂಸಿಂಗ್‌ ನಗರ, ಹರಿದ್ವಾರ ಹಾಗೂ ಪುರಿಯ ವಿವಿಧ ಮತಗಟ್ಟೆಗಳಲ್ಲಿ ಈ ಪ್ರಕರಣಗಳು ನಡೆದಿವೆ. ಇದಲ್ಲದೆ, ಕರ್ತವ್ಯದ ಸಮಯದಲ್ಲಿ ಮದ್ಯಪಾನ ಮಾಡಿದ್ದ ಸಿಬ್ಬಂದಿಯೊಬ್ಬನನ್ನು ಚುನಾವಣಾ ಕೆಲಸದಿಂದ ವಜಾ ಮಾಡಿರುವುದಾಗಿಯೂ ಚುನಾವಣಾ ಆಯೋಗದ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !