ರಾಜೇ ದಪ್ಪಗಿದ್ದಾರೆ ಎಂದಿದ್ದಕ್ಕೆ ಶರದ್‌ಯಾದವ್‌ ವಿಷಾದ

7

ರಾಜೇ ದಪ್ಪಗಿದ್ದಾರೆ ಎಂದಿದ್ದಕ್ಕೆ ಶರದ್‌ಯಾದವ್‌ ವಿಷಾದ

Published:
Updated:
Deccan Herald

ರಾಂಚಿ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ದಪ್ಪಗಾಗಿದ್ದಾರೆ ಎಂದು ಹೇಳಿದ್ದ ಜೆಡಿಯು ಮಾಜಿ ಮುಖಂಡ ಶರದ್‌ಯಾದವ್‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

’ನನಗೆ ಅವಮಾನ ಮಾಡಿರುವ ಶರದ್‌ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ರಾಜೇ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ರಾಜೇ ಅವರಿಗೆ ಪತ್ರ ಬರೆದಿರುವ ಶರದ್‌, ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಹೇಳಿದ್ದಾರೆ.

ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದಂತೆ ಸ್ಪಷ್ಟನೆ ನೀಡಿರುವ ಶರದ್‌, ರಾಜೇ ಅವರನ್ನು ಅವಮಾನಿಸಬೇಕು ಎಂಬ ಉದ್ದೇಶದಿಂದ ಆ ರೀತಿ ಹೇಳಿಲ್ಲ. ಹಾಸ್ಯವಾಗಿ ಹೇಳಿದ್ದೆ ಅಷ್ಟೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !