ಶನಿವಾರ, ಜನವರಿ 25, 2020
28 °C

ಬಂಧನ ವಾರಂಟ್‌: ನ್ಯಾಯಾಲಯದ ಮೊರೆ ಹೋಗಲಿರುವ ತರೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ(ಪಿಟಿಐ): ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿದೆ ಎಂಬ ಸುದ್ದಿಯ ಕುರಿತು ಸ್ಪಷ್ಟನೆ ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಸದ ಶಶಿ ತರೂರ್‌ ಭಾನುವಾರ ಹೇಳಿದ್ದಾರೆ.

1989ರಲ್ಲಿ ತರೂರ್‌ ಬರೆದಿರುವ ’ದಿ ಗ್ರೇಟ್‌ ಇಂಡಿಯನ್‌ ನಾವೆಲ್’ ಕೃತಿಯಲ್ಲಿ ನಾಯರ್‌ ಸಮುದಾಯದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಕೀಲೆ ಸಂಧ್ಯಾ ಎಂಬುವವರು ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯಕ್ಕೆ ಹಾಜರಾಗದ ಕಾರಣ ತರೂರ್‌ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿದೆ ಎಂದು ದೂರುದಾರರಾದ ಸಂಧ್ಯಾ ತಿಳಿಸಿದ್ದಾರೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು