ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಪಂಚದಲ್ಲಿ

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

1. ಧುಮುಕುತ್ತಿರುವ ಶುದ್ಧ ಜಲಧಾರೆಯೊಂದು ಚಿತ್ರ-1ರಲ್ಲಿದೆ. ಧರೆಯ ಸಕಲ ಜೀವಿಗಳ ಉಳಿವಿಗೆ, ಬೆಳವಣಿಗೆಗೆ ನೀರು ಅನಿವಾರ್ಯ, ಅತ್ಯವಶ್ಯ - ಹೌದಲ್ಲ? ಆದ್ದರಿಂದಲೇ ಎಲ್ಲ ಜೀವಿಗಳ ಶರೀರದ ಪ್ರಧಾನ ಭಾಗ ನೀರೇ ಆಗಿದೆ. ಮಾನವ ಶರೀರದ ಒಟ್ಟೂ ದ್ರವ್ಯದಲ್ಲಿ ನೀರಿನ ಅಂಶ ಎಷ್ಟು ಗೊತ್ತೇ?

ಅ. 73%

ಬ. 65%

ಕ. 60%

ಡ. 54%

2. ಬಿಸಿ ಮರುಭೂಮಿಯಲ್ಲಿ ನೆಲೆಸಿ, ಅತ್ಯಪರೂಪವಾಗಿ ಸುರಿವ ಮಳೆ ನೀರನ್ನು ಅತ್ಯಂತ ಬೇಗ ಹೀರಿ ಸಂಗ್ರಹಿಸಿ, ನಿಧಾನವಾಗಿ ಬೆಳೆಯುತ್ತ, ನೂರಾರು ವರ್ಷ ಬಾಳುವ ವಿಶಿಷ್ಟ ಕಳ್ಳಿ ವಿಧ ‘ಸೆಗ್ವಾರೋ’ ಚಿತ್ರ-2ರಲ್ಲಿದೆ. ಈ ವಿಶ್ವ ವಿಖ್ಯಾತ ಸಸ್ಯದ ನೈಸರ್ಗಿಕ ನೆಲೆ ಇವುಗಳಲ್ಲಿ ಯಾವುದು?

ಅ. ಆಫ್ರಿಕಾದ ಸಹಾರಾ ಮರುಭೂಮಿ

ಬ. ಉತ್ತರ ಅಮೆರಿಕದ ಸೋನೋರಾನ್ ಮರುಭೂಮಿ

ಕ. ದಕ್ಷಿಣ ಅಮೆರಿಕದ ಅಟಕಾಮಾ ಮರುಭೂಮಿ

ಡ. ಏಷ್ಯಾದ ಥಾರ್ ಮರುಭೂಮಿ

ಇ. ಆಫ್ರಿಕಾದ ನಾಮಿಬ್ ಮರುಭೂಮಿ

3. ಚಿತ್ರ-3ರಲ್ಲಿರುವ ವಿಚಿತ್ರ, ವಿಶಿಷ್ಟ ರೂಪದ ಮತ್ಸ್ಯವನ್ನು ನೋಡಿ. ರೂಪಾನ್ವಯ ಹೆಸರಿನಿಂದಲೇ ಪ್ರಸಿದ್ಧವಾಗಿರುವ ಈ ಮೀನಿನ ಹೆಸರೇನು?

ಅ. ಮುಳ್ಳು ಮೀನು

ಬ. ಜೀಬ್ರಾ ಮೀನು

ಕ. ಬಲೂನು ಮೀನು

. ಮುಳ್ಳು ಹಂದಿ ಮೀನು

4. ಅಟ್ಲಾಂಟಿಕ್ ಸಾಗರಾವಾರದ ದ್ವೀಪಗಳಲ್ಲಿ ವಾಸಿಸುವ, ವಿದೂಷಕನಂತಹ ರೂಪದ, ಸುಪ್ರಸಿದ್ಧ ಮೀನುಗಾರ ಹಕ್ಕಿ ಚಿತ್ರ-4ರಲ್ಲಿದೆ. ಯಾವುದು ಈ ಹಕ್ಕಿ?

ಅ. ಆಲ್ಬಟ್ರಾಸ್

ಬ. ಕಿಂಗ್ ಫಿಷರ್

ಕ. ಪಫಿನ್

. ಕಾರ್ಮೋರಾಂಟ್

5. ಚಿತ್ರ-5ರಲ್ಲಿರುವ ‘ಆರ್ಕ್ಟಿಕ್ ಟರ್ನ್’ ಹಕ್ಕಿ ಜೋಡಿಯನ್ನು ಗಮನಿಸಿ. ಖಗ ಸಾಮ್ರಾಜ್ಯದಲ್ಲಿ ಈ ಹಕ್ಕಿಯ ಅಸಾಮಾನ್ಯ ಸಾಹಸದ, ಪರಮ ವಿಸ್ಮಯದ ವಿಶ್ವ ದಾಖಲೆ ಏನು?

ಅ. ಅತ್ಯಂತ ಸಂಕೀರ್ಣ ಗೂಡಿನ ನಿರ್ಮಾಣ

ಬ. ಅತ್ಯಂತ ವೇಗದ ಹಾರಾಟ

ಕ. ಸರ್ವೋತ್ತಮ ಹಾರಾಟ ಕೌಶಲ್ಯ

ಡ. ಅತ್ಯಂತ ದೀರ್ಘ ವಲಸೆ ಯಾನ

6. ಧರೆಯ ಯಾವುದೇ ಪ್ರದೇಶದ, ಯಾವುದೇ ಪರಿಸರದ ಸಸ್ಯಗಳನ್ನೂ ಸಂಗ್ರಹಿಸಿಟ್ಟು ಬೆಳೆಸಬಹುದಾದ ಅತ್ಯಂತ ವಿಶಿಷ್ಟ ನಿರ್ಮಿತಿಯೊಂದು ಚಿತ್ರ-6ರಲ್ಲಿದೆ. ಇಂಥ ನಿರ್ಮಿತಿಗಳ ಹೆಸರೇನು?

ಅ. ಗಾಜಿನ ಮನೆ

ಬ. ಹಸಿರು ಮನೆ

ಕ. ಪಾರಕ ಮನೆ

ಡ. ಸಸ್ಯ ಪ್ರದರ್ಶನಾಗಾರ

7. ಚಿತ್ರ-7ರಲ್ಲಿರುವ ಕೀಟವನ್ನೂ, ಅದರ ಕುಡಿ ಮೀಸೆಗಳನ್ನೂ ಗಮನಿಸಿ. ಈ ಜೀವಿ ಯಾವುದು ಗುರುತಿಸಲು ಸಾಧ್ಯವೇ?

ಅ. ಜಿರಳೆ

ಬ. ಪತಂಗ

ಕ. ಕಣಜ

ಡ. ದುಂಬಿ

8. ಕಡಲ ವಾಸಿಗಳಾಗಿರುವ, ಸಸ್ತನಿ ವರ್ಗಕ್ಕೆ ಸೇರಿರುವ, ದೈತ್ಯ ಶರೀರವನ್ನು ಪಡೆದಿರುವ ‘ತಿಮಿಂಗಿಲ’ಗಳ ಎರಡು ವಿಧಗಳು ಚಿತ್ರ-8 ಮತ್ತು ಚಿತ್ರ-9ರಲ್ಲಿವೆ:

ಅ. ಚಿತ್ರ-8ರಲ್ಲಿರುವ ತಿಮಿಂಗಿಲ ಯಾವುದು? ಅದರ ವಿಶ್ವ ದಾಖಲೆ ಏನು?

ಬ. ಚಿತ್ರ-9ರಲ್ಲಿರುವ ತಿಮಿಂಗಿಲ ಯಾವುದು? ಅದರ ವೈಶಿಷ್ಟ್ಯ ಏನು?

9. ಆಗಸದಲ್ಲಿ ಮೈದಳೆವ ಮೇಘಗಳದು ಭಿನ್ನ ಭಿನ್ನ ರೂಪ, ಗಾತ್ರ ಮತ್ತು ಔನ್ನತ್ಯ - ಹೌದಲ್ಲ? ಪರ್ವತದಂತೆ ಬೃಹದಾಕಾರ ತಳೆದು, ಮಿಂಚು – ಗುಡುಗು – ಸಿಡಿಲುಗಳೊಡನೆ ಭಾರೀ ಮಳೆ ಸುರಿಸುವ ಮೇಘ ವಿಧ ಚಿತ್ರ-10ರಲ್ಲಿದೆ. ಇಂಥ ಮೇಘಗಳ ಹೆಸರೇನು?

ಅ. ನಿಂಬೋ ಸ್ಟ್ರಾಟಸ್

ಬ. ಕ್ಯುಮುಲೋ ನಿಂಬಸ್

ಕ. ಕ್ಯುಮುಲೋ ಸ್ಟ್ರಾಟಸ್

ಡ. ಆಲ್ಟೋ ಕ್ಯುಮುಲಸ್

10. ನಮ್ಮ ಸೌರವ್ಯೂಹದ್ದೇ ಭೂಮ್ಯೇತರ ಗ್ರಹವೊಂದು ಚಿತ್ರ-11ರಲ್ಲಿದೆ. ಹಳದಿ ವರ್ಣದ ದಟ್ಟ ಮೇಘಗಳಿಂದ ಆವರಿಸಲ್ಪಟ್ಟು, ಸೂರ್ಯನ ಬೆಳಕನ್ನು ಪ್ರತಿಫಲಿಸಿ ಉಜ್ವಲವಾಗಿ ಕಂಗೊಳಿಸುವ ಈ ಗ್ರಹದ ಬಗೆಗೆ ಮೂರು ಪ್ರಶ್ನೆಗಳು:

ಅ. ಈ ಗ್ರಹ ಯಾವುದು?

ಬ. ಈ ಗ್ರಹವನ್ನು ಆವರಿಸಿರುವ ಮೋಡಗಳ ಹಳದಿ ವರ್ಣಕ್ಕೆ ಕಾರಣವಾಗಿರುವ ಮೂಲ ವಸ್ತು ಯಾವುದು?

ಕ. ಈ ಗ್ರಹದ ಗಾತ್ರ ಬೇರೆ ಯಾವ ಗ್ರಹದ ಗಾತ್ರಕ್ಕೆ ಸರಿಸುಮಾರು ಸಮ?

11. ವಿಶ್ವದಲ್ಲಿನ ವಿಶಿಷ್ಟ ರೂಪದ ಅಂತರಿಕ್ಷ ಕಾಯವೊಂದು ಚಿತ್ರ-12ರಲ್ಲಿದೆ. ಈ ಕಾಯವನ್ನು ಗುರುತಿಸಬಲ್ಲಿರಾ?

ಅ. ನಿಹಾರಿಕೆ

ಬ. ನಕ್ಷತ್ರ ಗುಚ್ಛ

ಕ. ಸೂಪರ್ ನೋವಾ ಅವಶೇಷ

ಡ. ಗೆಲಾಕ್ಸಿ

12. ನಮ್ಮ ಸೌರವ್ಯೂಹಕ್ಕೆ ಸೇರಿಲ್ಲದ, ಸೌರೇತರ ನಕ್ಷತ್ರವೊಂದನ್ನು ಪರಿಭ್ರಮಿಸುತ್ತಿರುವ ಒಂದು ಅನ್ಯ ಗ್ರಹ (ಎಕ್ಸೋ ಪ್ಲಾನೆಟ್) ಚಿತ್ರ-13ರಲ್ಲಿದೆ. ಈವರೆಗೆ ಸ್ಪಷ್ಟವಾಗಿ ಪತ್ತೆಯಾಗಿರುವ ಅನ್ಯಗ್ರಹಗಳ ಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ಅತ್ಯಂತ ಸಮೀಪ?

ಅ. 1,245

ಬ. 2,942

ಕ. 3,743

ಡ. 4,658

*******

ಉತ್ತರಗಳು:

1. ಕ - 60%

2. ಬ - ಸೋನೋರಾನ್ ಮರುಭೂಮಿ

3. ಡ - ಮುಳ್ಳು ಹಂದಿ ಮೀನು

4. ಕ - ಪಫಿನ್

5. ಡ - ಅತ್ಯಂತ ದೀರ್ಘ ವಲಸೆ ಯಾನ

6. ಬ- ಹಸಿರು ಮನೆ

7. ಡ - ದುಂಬಿ

8. ಚಿತ್ರ 8 - ನೀಲಿ ತಿಮಿಂಗಿಲ; ಧರೆಯ ಅತ್ಯಂತ ದೈತ್ಯ ಪ್ರಾಣಿ; ಚಿತ್ರ 9 - ನಾರ್ವಾಲ್; ಈಟಿಯಂಥ ಕೊಂಬು

9. ಬ - ಕ್ಯುಮುಲೋ ನಿಂಬಸ್

10. ಅ - ಶುಕ್ರ ಗ್ರಹ; ಬ - ಗಂಧಕ; ಕ - ಭೂಮಿ

11. ಡ - ಗೆಲಾಕ್ಸಿ

12. ಕ - 3743

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT