ಶನಿವಾರ, ಮಾರ್ಚ್ 6, 2021
32 °C

ಅಮೇಠಿಯಲ್ಲಿ ಸಂಸದೆ ಸ್ಮೃತಿ ಇರಾನಿ ಬೆಂಬಲಿಗನ ಗುಂಡಿಟ್ಟು ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೇಠಿ: ಸಂಸದೆ ಸ್ಮೃತಿ ಇರಾನಿ ಬೆಂಬಲಿಗ ಹಾಗೂ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌ನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. 

ಶನಿವಾರ ತಡ ರಾತ್ರಿ ಬರೌಲಿಯಾ ಗ್ರಾಮದಲ್ಲಿ ಹತ್ಯೆ ಮಾಡಲಾಗಿದೆ. ತಡ ರಾತ್ರಿ ಸುರೇಂದ್ರ ಸಿಂಗ್‌ ನಿವಾಸಕ್ಕೆ ಬಂದಿದ್ದ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೋಟರ್‌ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಸುರೇಂದ್ರ ಸಿಂಗ್‌ ಅವರ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಮಲಗಿದ್ದ ಸುರೇಂದ್ರ ಸಿಂಗ್‌ ಬಾಗಿಲು ತೆರೆದು ಹೊರ ಬಂದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಗುಂಡು ಹೊಡೆದಿದ್ದಾರೆ. ಸುರೇಂದ್ರ ಸಿಂಗ್‌ ದೇಹದಲ್ಲಿ ಮೂರು ಗುಂಡುಗಳು ಹೊಕ್ಕಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಲ್ಲಿನ ಜಾಮೊ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸಂಸದೆ ಸ್ಮೃತಿ ಇರಾನಿ ಪರವಾಗಿ ಸುರೇಂದ್ರ ಸಿಂಗ್‌ ಚುನಾವಣಾ ಪ್ರಚಾರ ಮಾಡಿದ್ದರು. ನಿನ್ನೆ ರಾತ್ರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ತಡ ರಾತ್ರಿ ಮನೆಗೆ ಬಂದು ಮಲಗಿದ್ದರು ಎಂದು ಅವರು ಕುಟುಂಬದವರು ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು