ದೀಪಿಕಾ ಪಡುಕೋಣೆಯ ರಾಜಕೀಯ ಒಲವು ಗೊತ್ತಿದೆ: ಸ್ಮೃತಿ ಇರಾನಿ

ಚೆನ್ನೈ: ದೀಪಿಕಾ ಪಡುಕೋಣೆ 2011ರಲ್ಲಿ ಆಕೆಯ ರಾಜಕೀಯ ಒಲವಿನ ಬಗ್ಗೆ ಹೇಳಿದ್ದಳು. ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾಳೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಗುರುವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ತಾವು ಯಾರ ಪರ ನಿಲ್ಲುತ್ತಿದ್ದೇವೆ ಎಂಬುದು ಸುದ್ದಿಗಳನ್ನು ತಿಳಿದುಕೊಂಡಿರುವವರಿಗೆ ಗೊತ್ತಿರುತ್ತದೆ. ಸಿಆರ್‌ಪಿಎಫ್ ಯೋಧರು ಹುತಾತ್ಮರಾದಾಗ ಸಂಭ್ರಮಿಸಿದವರೊಂದಿಗೆ ನೀವು ನಿಲ್ಲುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿರಬೇಕು ಎಂದು ದೀಪಿಕಾಳ ಜೆಎನ್ಯು ಭೇಟಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
. @smritiirani takes down Deepika Padukone for supporting Bharat Tere Tukde Gang pic.twitter.com/XzqTmSjeaN
— Tajinder Pal Singh Bagga (@TajinderBagga) January 10, 2020
ಆಕೆಯ ರಾಜಕೀಯ ಒಲವು ಬಗ್ಗೆ ಈ ಹಿಂದೆಯೇ ಗೊತ್ತಿತ್ತು. ಇತರ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸುವ ಜನರ ಜತೆ ನಿಲ್ಲುವ ಆಕೆಯ ಸ್ವಾತಂತ್ರ್ಯವನ್ನು ನಾನು ನಿರಾಕರಿಸುವುದಿಲ್ಲ. ಅದು ಆಕೆಯ ಸ್ವಾತಂತ್ರ್ಯ.
ಆಕೆ 2011ರಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ತಮ್ಮ ರಾಜಕೀಯ ನಿಲುವನ್ನು ವ್ಯಕ್ತಪಡಿಸಿದ್ದರು. ಭಾರತ್ ತೇರೇ ಟುಕ್ಡೇ ಹೋಂಗೇ ( ಭಾರತವನ್ನು ತುಂಡು ಮಾಡುತ್ತೇವೆ) ಎಂದು ಹೇಳಿದ ಜನರ ಜತೆ ನಿಂತುಕೊಳ್ಳುವುದು ಆಕೆಯ ಸ್ವಾತಂತ್ರ್ಯ ಎಂದಿದ್ದಾರೆ ಸ್ಮೃತಿ ಇರಾನಿ.
ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸುತ್ತೇನೆ ಎಂಬುದಾಗಿ ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಹೇಳಿದ್ದರು. ದೀಪಿಕಾ ಜೆಎನ್‌ಯುಗೆ ಭೇಟಿ ನೀಡಿದ ಬೆನ್ನಲ್ಲೇ ಆಕೆಯ ಹಳೇ ಸಂದರ್ಶನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಇದನ್ನೂ ಓದಿ: ಜೆಎನ್‌ಯುಗೆ ದೀಪಿಕಾ ಪಡುಕೋಣೆ ಭೇಟಿ, ದಾಳಿಗೊಳಗಾಗಿದ್ದ ವಿದ್ಯಾರ್ಥಿಗಳಿಗೆ ಬೆಂಬಲ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.