ಗುರುವಾರ , ಏಪ್ರಿಲ್ 2, 2020
19 °C
ಕೊರೊನಾ ಸೋಂಕು, ಬಡವರು, ಮಹಿಳೆಯರು,  ವಜದ್ದರು , ಕಾರ್ಮಿಕರಿಗೆ ಕೇಂದ್ರ ಸರ್ಕಾರದ ವಿವಿಧ ಕೊಡುಗೆಗಳ ಘೋಷಣೆ

ಗೃಹ ಬಂಧನ: ಜನರಿಗೆ ಸಹಾಯಧನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 'ಕೊರೊನಾ-2' ವೈರಸ್ ಹರಡುವುದಕ್ಕೆ ಕಡಿವಾಣ ಹಾಕಲು ದೇಶದಾದ್ಯಂತ ಜಾರಿಗೆ ಬಂದಿರುವ ಜನಜೀವನ  ಮತ್ತು ಆರ್ಥಿಕ ಚಟುವಟಿಕೆಗಳ ದಿಗ್ಬಂಧನದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರವು ವಿವಿಧ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮತ್ತು ಆಹಾರ ಭದ್ರತೆ ಒಳಗೊಂಡಂತೆ ₹1.70 ಲಕ್ಷ ಕೋಟಿ ಮೊತ್ತದ ಪರಿಹಾರ ಕೊಡುಗೆ ಘೋಷಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪ್ರಕಟಿಸಿದ ಗರೀಬ್ ಕಲ್ಯಾಣ ಯೋಜನೆಯಿಂದ ಬಡವರು, ರೈತರು, ವಿಧವೆಯರು, ನರೇಗಾ ಫಲಾನುಭವಿಗಳು, ಮಹಿಳಾ ಸ್ವಸಹಾಯ ಸಂಘಗಳು, ಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ದೇಶದ ₹80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ಆರೋಗ್ಯ ಕಾರ್ಯಕರ್ತರು ₹50 ಲಕ್ಷದ ವೈದ್ಯಕೀಯ ವಿಮೆ ರಕ್ಷಣೆಗೆ ಒಳಪಡಲಿದ್ದಾರೆ.

ಸರ್ಕಾರವು ₹2 ಲಕ್ಷ ಕೋಟಿ ಮೊತ್ತದ ಆರ್ಥಿಕ ಕೊಡುಗೆ ಪ್ರಕಟಿಸಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಎಲ್ಲ ಬಗೆಯ ಸಾಲಗಳ ಮರುಪಾವತಿಗೆ 3 ತಿಂಗಳ ಬಿಡುವು ನೀಡಬೇಕು ಎನ್ನುವುದು
ಪ್ರಮುಖ ಬೇಡಿಕೆಯಾಗಿದೆ.

ಪರಿಹಾರ ಕೊಡುಗೆಯು ಜನರ ಸಂಕಷ್ಟಕ್ಕೆ ತಕ್ಷಣದಿಂದಲೇ ಪರಿಹಾರ ಕಲ್ಪಿಸಲಿದ್ದು, ಯಾರೊಬ್ಬರೂ ಹಸಿವಿನಿಂದ ಇರಬಾರದು
ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ

* ಬಡಜನರಿಗೆ ಪಡಿತರ
ಬಡವರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ ಅಥವಾ
5ಕೆ.ಜಿ. ಗೋಧಿ ಉಚಿತ
(ಮುಂದಿನ ಮೂರು ತಿಂಗಳು)
ಇದು ಪಡಿತರದಲ್ಲಿ ದೊರೆಯುವುದಕ್ಕಿಂತ ಹೆಚ್ಚುವರಿ
ಆಯಾ ಪ್ರದೇಶದ ಅಗತ್ಯಕ್ಕೆ ತಕ್ಕಂತೆ 1 ಕೆ.ಜಿ. ಬೇಳೆ ಉಚಿತ

* ಉಜ್ವಲಾ ಫಲಾನುಭವಿಗಳಿಗೆ
ಮೂರು ತಿಂಗಳವರೆಗೆ ಉಚಿತ ಅಡುಗೆ ಅನಿಲ (ಎಲ್ ಪಿಜಿ)
₹8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಪ್ರಯೋಜನ

* ಸ್ವಸಹಾಯ ಗುಂಪುಗಳಿಗೆ ಸಾಲ
ಮಹಿಳಾ ಸ್ವಸಹಾಯ ಗುಂಪುಗಳಿಗೆ ಆಧಾರರಹಿತ ಸಾಲ ದುಪ್ಪಟ್ಟು

ಈಗಿನ ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ 

* ವೃದ್ದಾಪ್ಯ/ ವಿಧವಾ ವೇತನ
ಬಡ ಹಿರಿಯ ನಾಗರಿಕರು,
 ವಿಧವೆಯರು, ಅಂಗವಿಕಲರಿಗೆ
₹1,000 ಎಕ್ಸ್ ಗ್ರೇಸಿಯಾ 
3 ಕೋಟಿ ಜನರಿಗೆ ಅನುಕೂಲ 

* ಮಹಿಳಾ ಜನಧನ್ 
ಜನಧನ್  ಖಾತೆ ಹೊಂದಿರುವ ಮಹಿಳೆಯರಿಗೆ ಮೂರು ತಿಂಗಳಿಗೆ ₹1500 
ನೆರವು, ತಿಂಗಳಿಗೆ ₹500 ರಂತೆ
₹20 ಕೋಟಿ ಫಲಾನುಭವಿಗಳು.

* ರೈತರಿಗೆ ನಗದು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2000 ಏಪ್ರಿಲ್
ಮೊದಲ ವಾರದಲ್ಲಿ ಪಾವತಿ
ರೈತರ ಖಾತೆಗೆ ನೇರನಗದು
8.9 ಕೋಟಿ ರೈತರಿಗೆ ಸಹಾಯ 

* ಪಿಎಫ್ ಕೊಡುಗೆ 
100ಕ್ಕಿಂತ ಕಡಿಮೆ ಉದ್ಯೋಗಿಗಳು
ಇರುವ ಉದ್ದಿಮೆಗಳ ಸಿಬ್ಬಂದಿಯ ಭವಿಷ್ಯ ನಿಧಿ(ಇಪಿಎಫ್ )ಕಾರ್ಮಿಕರ ( ಶೇ 12) ಮತ್ತು ಮಾಲೀಕರ (ಶೇ. 12) ಒಟ್ಟು 
24ರಷ್ಟು ಕೊಡುಗೆಯನ್ನು ಮೂರು ತಿಂಗಳವರೆಗೆ ಕೇಂದ್ರ ಸರ್ಕಾರವೇ ಭರಿಸಲಿದೆ.

ಇದರ ಪ್ರಯೋಜನ ಪಡೆಯುವವರಲ್ಲಿ ತಿಂಗಳಿಗೆ ₹15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರ ಸಂಖ್ಯೆಯೇ (ಶೇ.90)ಹೆಚ್ಚು.

* ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಯ (ಇಪಿಎಫ್ ಒ) ಸದಸ್ಯರು ತಮ್ಮ ತುರ್ತು ವೆಚ್ಚಗಳಿಗಾಗಿ ಶೇ. 75ರಷ್ಟು ಇಲ್ಲವೇ ಮೂರು ತಿಂಗಳ ವೇತನದಷ್ಟು ಮೊತ್ತವನ್ನು ಮರಳಿ ಪಾವತಿಸದ ನಿಯಮದಡಿ
ಪಡೆಯಬಹುದು. ಇದರಿಂದ ₹4.8 ಕೋಟಿ ಉದ್ಯೋಗಿಗಳಿಗೆ ನೆರವಾಗಲಿದೆ.
ಜಿಲ್ಲಾ ಖನಿಜ ನಿಧಿಯಡಿ ಲಭ್ಯ ಇರುವ ಮೊತ್ತವನ್ನು ಕೊರೊನಾ ಪರೀಕ್ಷೆ ವೈದ್ಯಕೀಯ ತಪಾಸಣೆ, ಆರೋಗ್ಯ ರಕ್ಷಣೆ,  ಉದ್ದೇಶದ ಕಾರ್ಯಗಳಿಗೆ ಬಳಸಿಕೊಳ್ಳಲು ಸೂಚನೆ

* ಕೈಗಾರಿಕೆ ಮತ್ತು ಉದ್ದಿಮೆಗೆ ನೆರವಾಗಲು ಸರ್ಕಾರ ಇನ್ನೊಂದು ಪ್ರಕಟಿಸುವ ಸಾಧ್ಯತೆ ಇದೆ.

* ನರೇಗಾ ದಿನಗೂಲಿ ಹೆಚ್ಚಳ 
ಗ್ರಾಮೀಣ ಪ್ರದೇಶದಲ್ಲಿ ನರೇಗಾ ದಿನಗೂಲಿ
182 ರಿಂದ 202 ಕ್ಕೆ ಏರಿಕೆ
ಪ್ರತಿಯೊಬ್ಬರಿಗೆ ತಿಂಗಳಿಗೆ
2,000 ಹೆಚ್ಚುವರಿ ಮೊತ್ತ 

5 ಕೋಟಿ ಫಲಾನುಭವಿಗಳು
50 ಲಕ್ಷ ವಿಮೆ ಪರಿಹಾರ 

* ಕೊರೊನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಇರುವ ವೈದ್ಯರು ದಾದಿಯರು , ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ  ₹50 ಲಕ್ಷಮೊತ್ತದ ವಿಮೆಯೋಜನೆ ಘೋಷಣೆ
* ಕಟ್ಟಡ ನಿರ್ಮಾಣ ಕಾರ್ಮಿಕರು
ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡು ಅತಂತ್ರರಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ₹31 ಸಾವಿರ ಕೋಟಿ ಮೊತ್ತದ ಕಲ್ಯಾಣ ನಿಧಿ ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು