ಸೋಮವಾರ, ಜೂನ್ 21, 2021
30 °C

ಸ್ಟಾಲಿನ್ ನೇತೃತ್ವದ ಡಿಎಂಕೆ ಜತೆ ಕೆಲಸ ಮಾಡಲಿದ್ದಾರೆ ಪ್ರಶಾಂತ್ ಕಿಶೋರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

MK Stalin

ನವದೆಹಲಿ: ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅವರ ತಂಡ ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ  ಡಿಎಂಕೆ ಪಕ್ಷಕ್ಕೆ ನೆರವಾಗಲಿದೆ.

 ಎಐಎಡಿಎಂಕೆ ವಿರುದ್ಧ ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಲು ಡಿಎಂಕೆ ಕಾರ್ಯತಂತ್ರ ರೂಪಿಸಲಿದ್ದು,  ಪ್ರಶಾಂತ್‌ ಕಿಶೋರ್‌  ಅವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಇದಕ್ಕೆ ಸಹಾಯ ಮಾಡಲಿದೆ.
 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ತಮಿಳುನಾಡಿನ ಗತವೈಭವವನ್ನು ಮರಳಿ ತರುವ ನಮ್ಮ ಯೋಜನೆ ಸಫಲಗೊಳಿಸಲು  ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐ-ಪಿಎಸಿ) ನಮ್ಮೊಂದಿಗೆ  ಕಾರ್ಯ ನಿರ್ವಹಿಸಲಿದೆ ಎಂದು ಸ್ಟಾಲಿನ್ ಭಾನುವಾರ ಟ್ವೀಟಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಐ-ಪಿಎಸಿ, ನಮ್ಮ ತಮಿಳುನಾಡು ತಂಡವು ಮುಂದಿನ ಚುನಾವಣೆಯಲ್ಲಿ ಡಿಎಂಕೆ ಗೆಲುವಿಗೆ ಸಹಕಾರ ನೀಡಲಿದೆ ಎಂದಿದೆ.
 

 

ಇದನ್ನೂ ಓದಿ: ಆಪ್ತರ ನಡುವೆ ಮುನಿಸು: ನಿತೀಶ್‌ ಕುಮಾರ್–ಪ್ರಶಾಂತ್ ಕಿಶೋರ್ ನಡುವೆ ವಾಕ್ಸಮರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು