ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರ ಕಾಯಂ ನೇಮಕಾತಿಗೆ ಸುಪ್ರೀಂ ಕೋರ್ಟ್ ಅನುಮತಿ

ನೌಕಾಪಡೆಯಲ್ಲಿ
Last Updated 17 ಮಾರ್ಚ್ 2020, 15:33 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರ ಕಾಯಂ ನೇಮಕಾತಿಗೆ ಸುಪ್ರೀಂಕೋರ್ಟ್‌ ಮಂಗಳವಾರ ಒಪ್ಪಿಗೆ ನೀಡಿದೆ.

ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

ದೇಶದ ಸೇವೆ ಮಾಡುವ ಮಹಿಳಾ ನೌಕಾಪಡೆಗೆ ಕಾಯಂ ನೇಮಕಾತಿಗೆ ಮಾಡದೇ ಇದ್ದರೆ ಅದು ಅವರಿಗೆ ಮಾಡುವಅನ್ಯಾಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಭಾರತೀಯ ಸೇನಾಪಡೆಯಲ್ಲಿ ಖಾಯಂ ಆಯೋಗಕ್ಕೆ ತೀರ್ಪು ನೀಡಿದ ಬೆನ್ನಲ್ಲೇ ಉಚ್ಛ ನ್ಯಾಯಾಲಯ ನೌಕಾಪಡೆಯಲ್ಲಿಯೂ ಕಾಯಂ ನೇಮಕಾತಿಗೆ ಅನುಮತಿ ನೀಡಿದೆ.

ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ)ಗಿಂತ ಭಿನ್ನವಾಗಿ ಅವನು / ಅವಳು ನಿವೃತ್ತಿಯಾಗುವವರೆಗೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಖಾಯಂ ಆಯೋಗವು ಅರ್ಹತೆ ನೀಡುತ್ತದೆ. ಇದು ಪ್ರಸ್ತುತ 10 ವರ್ಷಗಳಾಗಿದ್ದು, ಇನ್ನೂ ನಾಲ್ಕು ವರ್ಷಗಳು ಅಥವಾ ಒಟ್ಟು 14 ವರ್ಷಗಳನ್ನು ವಿಸ್ತರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT