ಅಯೋಧ್ಯೆ ಭೂ ವಿವಾದ: ಸುಪ್ರೀಂ ಕೋರ್ಟಿನಲ್ಲಿ ಇಂದಿನಿಂದ ವಿಚಾರಣೆ 

7

ಅಯೋಧ್ಯೆ ಭೂ ವಿವಾದ: ಸುಪ್ರೀಂ ಕೋರ್ಟಿನಲ್ಲಿ ಇಂದಿನಿಂದ ವಿಚಾರಣೆ 

Published:
Updated:

ನವದೆಹಲಿ: ಅಯೋಧ್ಯೆಯ ವಿವಾದಿತ ಭೂಪ್ರದೇಶ ಹಂಚಿಕೆ ಮಾಡಿದ್ದರ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಗುರುವಾರದಿಂದ ನಡೆಯಲಿದೆ. 

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಸಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಉದಯ್‌ ಲಲಿತ್‌, ಎಸ್‌.ಎ.ಬೊಬ್ಡೆ, ಎಸ್‌.ವಿ ರಮಣ ಅವರು ಇದ್ದಾರೆ. 

ಇದನ್ನೂ ಓದಿ: ಮಂದಿರಕ್ಕೆ ತಕ್ಷಣ ಸುಗ್ರೀವಾಜ್ಞೆ ಇಲ್ಲ: ಮೋದಿ​

ವಿವಾದಿತ ಭೂಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಹಂಚಿಕೆ ಮಾಡಿ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. 2018ರ ಅಕ್ಟೋಬರ್ 29ರಂದು ಇವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು 2019ರ ಜನವರಿ 4ರಂದು ನಡೆಸುವುದಾಗಿ ಹೇಳಿತ್ತು.

4 ರಂದು  ಮೇಲ್ಮನವಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಒಂದೇ ನಿಮಿಷದಲ್ಲಿ ವಿಚಾರಣೆ ನಡೆಸಿ ಪ್ರಕರಣವನ್ನು ಹೊಸ ಸಂವಿಧಾನ ಪೀಠಕ್ಕೆ ವರ್ಗಾಯಿಸಿರುವುದಾಗಿ ಹೇಳಿತ್ತು. ಮುಂದಿನ ವಿಚಾರಣೆ ಜನವರಿ 10 ರಿಂದ ನಡೆಯಲಿದೆ ಎಂದು ನ್ಯಾಯಪೀಠ ಹೇಳಿತ್ತು. 

ಇನ್ನಷ್ಟು...

ಅಯೋಧ್ಯೆ ತೀರ್ಪು, ಇಸ್ಲಾಂಗೆ ಮಸೀದಿ ಹಂಗಿಲ್ಲ: 1994ರ ತೀರ್ಪು ಎತ್ತಿಹಿಡಿದ ‘ಸುಪ್ರೀಂ’

ಅಯೋಧ್ಯೆ ಪ್ರಕರಣ ಭೂ ವಿವಾದ ಮಾತ್ರ

* ಅಯೋಧ್ಯೆ: ಕಾನೂನು ರೂಪಿಸಲು ವಿಎಚ್‌ಪಿ ಆಗ್ರಹ

ರಾಮ ಮಂದಿರ ನಿರ್ಮಾಣಕ್ಕೆ ಆತುರ ಸಲ್ಲದು: ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌​

ರಾಮ ಮಂದಿರ ನಿರ್ಮಿಸದಿದ್ದರೆ ಹಿಂದೂ ಧರ್ಮಕ್ಕೆ ಹಿನ್ನಡೆ: ವಿಶ್ವೇಶತೀರ್ಥ ಸ್ವಾಮೀಜಿ​

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !