ಅಕ್ರಮ ಗಣಿಗಾರಿಕೆ: ₹100 ಕೋಟಿ ಠೇವಣಿಗೆ ‘ಸುಪ್ರೀಂ’ ಆದೇಶ

ಭಾನುವಾರ, ಜೂಲೈ 21, 2019
25 °C

ಅಕ್ರಮ ಗಣಿಗಾರಿಕೆ: ₹100 ಕೋಟಿ ಠೇವಣಿಗೆ ‘ಸುಪ್ರೀಂ’ ಆದೇಶ

Published:
Updated:
Prajavani

ನವದೆಹಲಿ (ಪಿಟಿಐ): ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಿಯಂತ್ರಣಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ಎನ್‌ಜಿಟಿ ವಿಧಿಸಿರುವ ₹100 ಕೋಟಿ ದಂಡವನ್ನು ಠೇವಣಿ ಇರಿಸುವಂತೆ ಮೇಘಾಲಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಪೀಠ, ದಂಡದ ಮೊತ್ತವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಬಿಸಿಬಿ) ಜಮಾ ಮಾಡುವಂತೆ ಹೇಳಿದೆ. 

ಅಕ್ರಮ ಗಣಿಗಾರಿಕೆ ಮೂಲಕ ಸಂಗ್ರಹಿಸಿರುವ ಕಲ್ಲಿದ್ದಲನ್ನು ಕೋಲ್‌ ಇಂಡಿಯಾ ಲಿಮಿಟೆಡ್‌ಗೆ (ಸಿಐಎಲ್‌) ಹಸ್ತಾಂತರಿಸಬೇಕು. ಈ ಕಲಿದ್ದಲನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ರಾಜ್ಯ ಸರ್ಕಾರದಲ್ಲಿ ಠೇವಣಿ ಇರಿಸಬೇಕು ಎಂದು ಕೋರ್ಟ್‌ ತಿಳಿಸಿದೆ. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !