ಸೋಮವಾರ, ಮಾರ್ಚ್ 1, 2021
25 °C

ರಾಜಕೀಯ ಬಂಡವಾಳಕ್ಕಾಗಿ ನಿರ್ದಿಷ್ಟ ದಾಳಿ: ಮೋದಿ ವಿರುದ್ಧ ರಾಹುಲ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎರಡು ವರ್ಷಗಳ ಹಿಂದೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್  ಡಿ.ಎಸ್. ಹೂಡಾ 'ಗಳಿಸಿದ ಯಶಸ್ಸಿನ ಬಗ್ಗೆ ಪ್ರಾರಂಭದಲ್ಲಿ ಹರ್ಷಚಿತ್ತರಾಗುವುದು ಸಹಜ. ಆದರೆ ಕಾರ್ಯಾಚರಣೆಯ ಬಗೆಗೆ ನಿರಂತರ ಪ್ರಚಾರ ಅನಗತ್ಯ' ಎಂದಿದ್ದಾರೆ. ಹೂಡಾ ಅವರ ಮಾತುಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಜಕೀಯ ಬಂಡವಾಳಕ್ಕಾಗಿ ನಿರ್ದಿಷ್ಟ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.

2016 ಸೆಪ್ಟೆಂಬರ್‌ 29ರಂದು ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕ್ ಉಗ್ರರ ಶಿಬಿರದ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ್ದ ವೇಳೆ ಹೂಡಾ ಅವರು ಉತ್ತರ ವಲಯದ ಸೇನಾ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಹೂಡಾ ಅವರ ಮಾತಿಗೆ ಸಹಮತ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ ರಾಹುಲ್,  ಮಿ. 36 ಅವರಿಗೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸೇನೆಯನ್ನು ಬಳಸಿದ್ದರಲ್ಲಿ ಯಾವುದೇ ನಾಚಿಕೆ ಇಲ್ಲ. ರಾಜಕೀಯ ಬಂಡವಾಳಕ್ಕಾಗಿ ಅವರು ನಿರ್ದಿಷ್ಟ ದಾಳಿ ನಡೆಸಿದರು. ರಫೇಲ್ ಒಪ್ಪಂದದ ಮೂಲಕ ಅನಿಲ್ ಅಂಬಾನಿಯ ಅಸಲಿ ಬಂಡವಾಳದಲ್ಲಿ 30,000 ಕೋಟಿ ಏರಿಕೆಯನ್ನುಂಟು ಮಾಡಿದರು ಎಂದಿದ್ದಾರೆ.
ಹೂಡಾ ಅವರ ಮಾತಿಗೆ ಮೆಚ್ಚುಗೆ ಸೂಚಿಸಿದ ರಾಹುಲ್ ನೀವು ನಿಜವಾದ ಸೇನಾಧಿಕಾರಿ, ಭಾರತ ಹೆಮ್ಮೆ ಪಡುತ್ತದೆ ಎಂದು ಟ್ವೀಟಿಸಿದ್ದಾರೆ.

ಏತನ್ಮಧ್ಯೆ, ಹೂಡಾ ಅವರ ಹೇಳಿಕೆ  ಬಗ್ಗೆ ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಇದೆಲ್ಲಾ ವೈಯಕ್ತಿಕ ದೃಷ್ಟಿಕೋನಗಳು. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದು ಬೇಡ. ಈ ಕಾರ್ಯಾಚರಣೆ ನಡೆಯುವಾಗ ಅವರು ಇದರಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಆದ್ದರಿಂದ ನಾನು ಅವರ ಮಾತುಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಸೇನೆಯಲ್ಲಿರುವ ಆಯ್ಕೆ ನಿರ್ದಿಷ್ಟ ದಾಳಿ. ಅದರಿಂದಾಗಿ ದೇಶಕ್ಕೆ ಧನಾತ್ಮಕ ಪರಿಣಾಮವುಂಟಾಗುತ್ತದೆ. ಭಯೋತ್ಪಾದನೆಯನ್ನು ತಡೆಗಟ್ಟಲು ಇದರಿಂದ ಸಾಧ್ಯವಾಗಿದೆ ಎಂದು ಜನರಲ್  ಆಫೀಸರ್ ಆಫ್ ಕಮಾಂಡಿಂಗ್ (ಉತ್ತರ ವಲಯ) ಲೆಫ್ಟಿನೆಂಟ್  ಜನರಲ್ ರಣ್‍ಬೀರ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು