ಶನಿವಾರ, ಸೆಪ್ಟೆಂಬರ್ 18, 2021
24 °C

194 ದಿನಗಳ ಬಳಿಕ ಉಪವಾಸ ಕೈಬಿಟ್ಟ ಸ್ವಾಮಿ ಆತ್ಮಾಬೋಧಾನಂದ 

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಹರಿದ್ವಾರ: ಗಂಗಾ ಉಳಿವಿಗಾಗಿ ಪಣತೊಟ್ಟು ಸತತ 194 ದಿನಗಳಿಂದ ಹರಿದ್ವಾರದಲ್ಲಿ ಉಪವಾಸ ಕೈಗೊಂಡಿದ್ದ ಸ್ವಾಮಿ ಆತ್ಮಾಬೋಧಾನಂದ ಅವರು ಭಾನುವಾರ ಉಪವಾಸ ಕೊನೆಗೊಳಿಸಿದ್ದಾರೆ. 

ಗಂಗಾನದಿ ಸ್ವಚ್ಛತೆ ರಾಷ್ಟ್ರೀಯ ಅಭಿಯಾನದ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯಿಂದ ಲಿಖಿತ ಭರವಸೆ ಪಡೆದುಕೊಂಡ ಬಳಿಕ ಹಣ್ಣಿನ ರಸ ಸೇವಿಸುವುದರ ಮೂಲಕ ಉಪವಾಸ ಕೈಬಿಟ್ಟಿದ್ದಾರೆ.

ಎನ್‌ಎಂಸಿಜಿಯ ನಿರ್ದೇಶಕ ರಾಜೀವ್ ರಂಜನ್ ಅವರನ್ನು ಏ.25ರಂದು ಭೇಟಿ ಮಾಡಿದ ವೇಳೆ ಅಣೆಕಟ್ಟು ನಿರ್ಮಾಣ, ನದಿಗಳ ಉಳಿವು, ಗಣಿಗಾರಿಕೆ ಹೀಗೆ ಇನ್ನಿತರೆ ವಿಚಾರಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ಪತ್ರ ನೀಡಿದ್ದೆ ಎಂದು ಬೋಧಾನಂದ ಹೇಳಿದ್ದಾರೆ. 

ಸರ್ಕಾರ ಹಾಗೂ ಎನ್‌ಎಂಸಿಜಿ ಸಮಿತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ಬಳಿಕ ಉಪವಾಸ ಕೈಬಿಟ್ಟಿದ್ದೇನೆ ಎಂದು ಹೇಳಿದರು. 

ಈ ವೇಳೆ ಹರಿದ್ವಾರದ ಉಪವಿಭಾಗಧಿಕಾರಿ ಕುಸುಮ್ ಚೌಹಾಣ್ ಹಾಗೂ ಮತ್ತಿತರರು ಇದ್ದರು.  

ಇದನ್ನೂ ಓದಿ: ಗಂಗೆಯನ್ನು ಕಟ್ಟಿ ಹಾಕುವಿರೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು