ಭಾನುವಾರ, ಜೂಲೈ 12, 2020
23 °C

ಕೋವಿಡ್‌-19: ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದರಕ್ಕೆ ಮಿತಿ ಹೇರಿದ ತಮಿಳುನಾಡು

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌–19 ಚಿಕಿತ್ಸೆಗೆ ವಿಧಿಸಲಾಗುವ ದರಕ್ಕೆ ತಮಿಳುನಾಡು ಸರ್ಕಾರ ಶನಿವಾರ ಮಿತಿ ಹೇರಿದೆ. 

ಕೋವಿಡ್‌–19 ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಶನಿವಾರ ಈ ಕ್ರಮ ಕೈಗೊಂಡಿದೆ. 

ತುರ್ತು ನಿಗಾ ಘಟಕದಲ್ಲಿ(ಐಸಿಯು) ಒಂದು ದಿನದ ಚಿಕಿತ್ಸೆಗೆ ಗರಿಷ್ಠ ₹15,000 ಹಾಗೂ ಸಾಮಾನ್ಯ ವಾರ್ಡ್‌ಗೆ ದಿನಕ್ಕೆ ಗರಿಷ್ಠ ₹7,500 ನಿಗದಿಪಡಿಸಲಾಗಿದೆ. ‘ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ಪಡೆಯಬಾರದು’ ಎಂದು ತಮಿಳುನಾಡು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಎ1, ಎ2, ಎ3 ಹಾಗೂ ಎ4 ಆಸ್ಪತ್ರೆಗಳಾಗಿ ವಿಭಾಗಿಸಲಾಗಿದೆ. ಸಾಮಾನ್ಯ ವಾರ್ಡ್‌ಗೆ ದಾಖಲಾಗಿರುವ ಸೋಂಕಿನ ಲಕ್ಷಣಗಳು ಇಲ್ಲದಿರುವ ಅಥವಾ ಸೋಂಕಿನ ಆರಂಭಿಕ ಲಕ್ಷಣಗಳು ಇರುವ ರೋಗಿಗಳಿಗೆ ಎ1 ಹಾಗೂ ಎ2 ಆಸ್ಪತ್ರೆಗಳಲ್ಲಿ ದಿನಕ್ಕೆ ಗರಿಷ್ಠ ₹7,500 ಹಾಗೂ ಎ3, ಎ4 ಆಸ್ಪತ್ರೆಗಳಲ್ಲಿ ದಿನಕ್ಕೆ ಗರಿಷ್ಠ ₹5,000ಕ್ಕಿಂತ ಅಧಿಕ ಹಣ ಪಡೆಯಬಾರದು ಎಂದು ಇಲಾಖೆ ಸೂಚಿಸಿದೆ. ನಾಲ್ಕೂ ವಿಭಾಗಗಳಲ್ಲಿ ಐಸಿಯುನಲ್ಲಿ ಚಿಕಿತ್ಸೆಗೆ ಗರಿಷ್ಠ ₹15 ಸಾವಿರ ನಿಗದಿಪಡಿಸಲಾಗಿದೆ. 

ಕೋವಿಡ್‌–19 ಚಿಕಿತ್ಸೆಯನ್ನು ಮುಖ್ಯಮಂತ್ರಿಗಳ ಆರೋಗ್ಯ ವಿಮೆ ಯೋಜನೆಯಡಿ ತಂದ ಕೆಲವೇ ದಿನಗಳಲ್ಲಿ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು